ಬೆಳೆಗಾರರಿಗೆ ಲಭಿಸಲಿ ಶ್ರಮಕ್ಕೆ ತಕ್ಕ ಫಲ...

Mango Lead
Published on

ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಆಶಯ

ಐದು ದಿನಗಳ ಮಾವು ಮೇಳಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಹವಾಮಾನ ವೈಪರೀತ್ಯದ ಇಂದಿನ ಸಂದರ್ಭದಲ್ಲಿ ಯಾವುದೇ ಬಗೆಯ ಕೃಷಿ ಕಾರ್ಯ ಸುಲಭವಲ್ಲ. ಆದರೂ ಕೃಷಿಕರು ನಿರಂತರವಾಗಿ ವಿವಿಧ ಬೆಳೆಗಳನ್ನು ಬೆಳೆಸುತ್ತಲಿದ್ದು, ಅವರ ಶ್ರಮಕ್ಕೆ ತಕ್ಕ ಫಲ ಸಿಗಬೇಕಿದೆ ಎಂದು ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಆಶಯ ವ್ಯಕ್ತಪಡಿಸಿದರು.

Mango 2
ಸೀಕೋ ಮತ್ತು ಯುಬಿ ಫ್ರುಟ್ಸ್​ ಮಂಗಳೂರು ಆಶ್ರಯದಲ್ಲಿ ಉಡುಪಿ ದೊಡ್ಡಣಗುಡ್ಡೆಯಲ್ಲಿರುವ ತೋಟಗಾರಿಕಾ ಇಲಾಖೆಯ ರೈತಾ ಸೇವಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ಮಾವು ಮೇಳಕ್ಕೆ ಮೇ 14ರಂದು ಬೆಳಗ್ಗೆ ಚಾಲನೆ ನೀಡಿ ಮಾತನಾಡಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ನಿಧೀಶ ಕೆ.ಜೆ., ಗುರುಪ್ರಸಾದ ಮಾತನಾಡಿದರು.

Mango 4
ಸೀಕೋ ಮತ್ತು ಯುಬಿ ಫ್ರುಟ್ಸ್​​ ಪಾಲುದಾರ ಅಬ್ದುಲ್​ ಕುಂಞಿ, ಸಿದ್ದೀಕ್​ ಇತರರು ಉಪಸ್ಥಿತರಿದ್ದರು. ಮೆನೇಜರ್​ ಮುಹಮ್ಮದ್​ ಹ್ಯಾರಿಸ್​ ಕುದ್ರೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಮೇ 18ರವರೆಗೆ ಪ್ರದರ್ಶನ, ಮಾರಾಟ

Mango 3
ಮಾವು ಮೇಳದಲ್ಲಿ ವಿವಿಧ ಮಾವು ತಳಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮೇ 18ರ ವರೆಗೆ ನಡೆಯಲಿದೆ. ಸ್ಥಳೀಯವಾಗಿ ಬೆಳೆಯುವ ಮಾವಿನ ತಳಿಗಳಾದ ಬನೆಡ್​, ಆಪೂಸು, ಮುಂಡಪ್ಪ, ಕದ್ರಿ, ಪೈರಿ, ಕಳಕ್ಟರ್​, ಕಾಲಪ್ಪಾಡಿ ಲಭ್ಯವಿದೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ಬೆಳೆಯುವ ತಳಿಗಳಾದ ಮಲ್ಲಿಕಾ, ಮಾಲಗೋವಾ, ನೀಲಂ, ಸಿಂಧೂರ, ಬಂಗನಪಲ್ಲಿ, ಕೇಸರಿ, ದಶಹರಿ ಮತ್ತು ಶುಗರ್​ ಬೇಬಿ ಸಹಿತ ಹಲವು ರುಚಿಕರ ಮಾವುಗಳು ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net