ಮೈಸೂರಿನಲ್ಲಿ ಐವರು ಬೈಕ್ ಕಳ್ಳರ ಬಂಧನ, 22 ಬೈಕ್‌ಗಳು ವಶಕ್ಕೆ

bike-motorcycle-parking-bombay-mumbai-maharashtra-india-asia-asian-ET21ED.jpg
Published on

ಮೈಸೂರು: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಪೊಲೀಸರು ಬೈಕ್ ಕಳವು ಮಾಡುತ್ತಿದ್ದ 5 ಆರೋಪಿಗಳನ್ನು ಬಂಧಿಸಿ 22 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ನಂಜನಗೂಡು ಪಟ್ಟಣ ಠಾಣೆ ಪೊಲೀಸರು ಆ.18 ರಂದು ಮೂವರು ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳಿಂದ 8 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ತಿ.ನರಸೀಪುರ ಠಾಣೆ ಪೊಲೀಸರು ಆ.20 ರಂದು ಗಸ್ತು ಸಂದರ್ಭ ಇಬ್ಬರು ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕಳವು ಪ್ರಕರಣ ಬಯಲಿಗೆ ಬಂದಿದ್ದು, ಆರೋಪಿಗಳಿಂದ 14 ಬೈಕ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net