ಗಿಳಿಶಾಸ್ತ್ರ ಹೇಳುತ್ತಿದ್ದ ಐವರು ವಶಕ್ಕೆ, ಮಂಗಳೂರಿನಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ

Parrot rescued
Published on

ಮಂಗಳೂರು: ಪೆಟ್ಟಿಗೆಯೊಳಗೆ ಹಾಕಿ ಶಾಸ್ತ್ರ ಹೇಳಲು ಬಳಸುತ್ತಿದ್ದ 5 ಗಿಳಿಗಳನ್ನು ಅರಣ್ಯಾಧಿಕಾರಿಗಳು ಗುರುವಾರ ಕದ್ರಿ ದೇವಳದ ಬಳಿ ರಕ್ಷಿಸಿದ್ದು, ಐವರನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು ಯಶವಂತಪುರ ನಿವಾಸಿ ಬಸವರಾಜ್, ಪಿಲ್ಲಹಳ್ಳಿ ನಿವಾಸಿಗಳಾದ ರಾಘವೇಂದ್ರ, ದುರ್ಗೇಶ್ ನಾಯಕರ್, ಗೊರಗುಂಟೆಪಾಳ್ಯ ನಿವಾಸಿ ಅಶೋಕ್ ಬೋರ, ಪಿಲ್ಲಹಳ್ಳಿ ನಿವಾಸಿ ಅಣ್ಣಪ್ಪ ಆರ್. ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ತಾವು ಹರಕೆ ಸೇವೆಯಾಗಿ ಗಿಳಿಶಾಸ ಸೇವೆ ಮಾಡುತ್ತಿದ್ದೇವೆ ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.

ಅರಣ್ಯದಿಂದ ಹಿಡಿದ ಗಿಳಿಗಳ ರೆಕ್ಕೆಯ ಗರಿಗಳು ಮತ್ತು ಮೂತಿ ಕತ್ತರಿಸಿ ಅವುಗಳನ್ನು ಹೊಡೆದು ದಂಡಿಸಿ, ಇವರು ಹೇಳಿದ ತಕ್ಷಣ ಪೆಟ್ಟಿಗೆಯಿಂದ ಹೊರಗೆ ಬಂದು ಶಾಸ್ತ್ರದ ಕಾರ್ಡ್ ತೆಗೆದು ಪುನಃ ಪೆಟ್ಟಿಗೆ ಒಳಗೆ ಹೋಗಿ ಬಂಧಿಯಾಗುವಂತೆ ಮಾಡುತ್ತಿದ್ದರು. ವನ್ಯ ಜೀವಿಗಳ ಸಂರಕ್ಷಣಾ ಕಾಯ್ದೆ ಪ್ರಕಾರ ಯಾವುದೇ ಅರಣ್ಯ ಜೀವಿಗಳನ್ನು ಹಿಡಿದು ಬಂಧಿಸುವುದು, ಹಿಂಸಿಸುವುದು ಕಾನೂನು ಪ್ರಕಾರ ಅಪರಾಧ.

ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ ಎನ್‌ಇಸಿಎ್ ಕಾರ್ಯಕರ್ತರೋರ್ವರ ಕಣ್ಣಿಗೆ ಬಿದ್ದ ಈ ಗಿಳಿ ಪೆಟ್ಟಿಗೆಗಳ ಬಗ್ಗೆ ಅರಣ್ಯಾಧಿಕಾರಿ ಶ್ರೀಧರ್ ಅವರಿಗೆ ಮಾಹಿತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net