

ಹಗರಿಬೊಮ್ಮನಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಪ್ರತಿಭಟನೆ ನಡೆಸಿತು.
ವಿಮುಕ್ತ ದೇವದಾಸಿಯರಿಗೆ ಜೀವನ ನಿರ್ವಹಣೆಗಾಗಿ 5 ಎಕರೆ ಕೃಷಿ ಭೂಮಿ ನೀಡಬೇಕು. ಮಾಸಾಶನ ಮೊತ್ತ ಹೆಚ್ಚಿಸಬೇಕು. 2017ರಿಂದ 2023ರವರೆಗೆ ವಸತಿ ಯೋಜನೆಯಡಿ ಆಯ್ಕೆಯಾದವರಿಗೆ ಸೂರು ಕಲ್ಪಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಸಲ್ಲಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಮರು ಸರ್ವೇ ಮಾಡಿ ಕೈಬಿಟ್ಟಿರುವ ವಿಮುಕ್ತ ದೇವದಾಸಿಯರನ್ನು ಸೇರ್ಪಡೆ ಮಾಡಬೇಕು.
ಮಕ್ಕಳಿಗೆ ವಿವಿಧ ಇಲಾಖೆಗಳಲ್ಲಿ ಅರ್ಹತೆಗೆ ತಕ್ಕಂತೆ ಉದ್ಯೋಗ ನೀಡವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ಬಿ.ಮಾಳಮ್ಮ, ತಾಲೂಕು ಕಾರ್ಯದರ್ಶಿ ಪಿ.ಚಾಂದ್‌ಬೀ, ತಾಲೂಕು ಅಧ್ಯಕ್ಷೆ ಬಿ.ಮೈಲಮ್ಮ, ಉಪಾಧ್ಯಕ್ಷರಾದ ಕೆ.ಅಂಜಿನಮ್ಮ, ತಟ್ನೆಮ್ಮ ನೀಲಮ್ಮ, ದೊಡ್ಡಬಸಮ್ಮ, ತಿಮ್ಮಕ್ಕ, ಕಾರ್ಯದರ್ಶಿಗಳಾದ ಬಿ.ಜ್ಯೋತಿ, ಎಚ್.ಬಸಮ್ಮ, ದುರುಗಮ್ಮ, ಹುಲಗೆಮ್ಮ, ಸೋಮಕ್ಕ ಇತರರಿದ್ದರು.