ಯೋಗ ಆರೋಗ್ಯ: ರೋಗ ನಿರೋಧಕ ಶಕ್ತಿ ವೃದ್ಧಿ

Fitness Corner
Published on

ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ದೈವಿಕ ಸ್ಥಾನ ಸಿಕ್ಕಿದೆ. ದೇಹ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳಿಸುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಬದಲಾದ ಜೀವನಶೈಲಿಯಿಂದ ಹಲವು ಗಂಭೀರ ಕಾಯಿಲೆಗಳಿಂದ ಮುಕ್ತಿ ಪಡೆಯಲು ಯೋಗ ರಾಮಬಾಣ ಇದ್ದಂತೆ. ಆ ನಿಟ್ಟಿನಲ್ಲಿ ಕನ್ನಡದ ನಂಬರ್ 1 ದಿನಪತ್ರಿಕೆ ವಿಜಯವಾಣಿ, ಈ ವಾರದಿಂದ ‘ಫಿಟ್ನೆಸ್’ ಕಾರ್ನರ್ ಅಂಕಣ ಆರಂಭಿಸಿದೆ. ಇದರಲ್ಲಿ ವಿವಿಧ ತಜ್ಞರಿಂದ ಉಪಯುಕ್ತ ಮಾಹಿತಿ ಒದಗಿಸಲಿದೆ. ಈ ಬಾರಿ ಯೋಗ ಥೆರಪಿಸ್ಟ್ ಡಾ.ಲತಾ ಶೇಖರ್, ಯೋಗ, ಮುದ್ರಾ ಮತ್ತು ಪ್ರಾಕೃತಿಕ ಚಿಕಿತ್ಸಾ ವಿಧಾನಗಳ ಮೂಲಕ ಸುಲಭ, ಸರಳ ಪರಿಹಾರದ ಪೂರ್ಣ ವಿವರ ಇಲ್ಲಿದೆ.

| ಹರೀಶ್ ಬೇಲೂರು ಬೆಂಗಳೂರು

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಅರೆಹಳ್ಳ ಗ್ರಾಮದ ಕೃಷಿ ಕುಟುಂಬದಲ್ಲಿ ಹುಟ್ಟಿರುವ ಡಾ.ಲತಾ ಶೇಖರ್, ಯೋಗ ಕ್ಷೇತ್ರದಲ್ಲಿ ಅವಿರತ ಸಾಧನೆಯಿಂದ ಹಂತ ಹಂತವಾಗಿ ಎತ್ತರಕ್ಕೆ ಬೆಳೆದಿದ್ದಾರೆ. ಹಲವು ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಗುಣಪಡಿಸುವಿಕೆ, ಸ್ವಾಸ್ಥ್ಯ ಸಮಾಜ ರೂಪಿಸುವ ಉದ್ದೇಶದಿಂದ ಅಳವಾಗಿ ಯೋಗದ ಬಗ್ಗೆ ಅಧ್ಯಯನ ಮಾಡಿದ್ದಾರೆ. ಬಿಎಎಂಎಸ್ (ಎಎಂ), ಎಂಎಸ್ಸಿ (ಯೋಗ), ಪಿಜಿ ಡಿಪ್ಲೊಮಾ (ಯೋಗ), ಸರ್ಟಿಫಿಕೇಟ್ ಆಫ್ ರೇಕಿ ಹಾಗೂ ರಿಫ್ಲೆಕ್ಸಾಲಜಿ, ಭಾವಾತೀತ ಧಾನ್ಯ, ಪ್ರಾಣಿಕ್ ಹಿಲಿಂಗ್ ಸೇರಿ ಹಲವು ಪದವಿ ಪೂರೈಸಿ ಅಪಾರ ಜ್ಞಾನ ವೃದ್ಧಿಸಿಕೊಂಡಿದ್ದಾರೆ. ಈ ಮೂಲಕ ಯೋಗ ಚಿಕಿತ್ಸೆಯಲ್ಲಿ ಇವರ ಹೆಸರು ಚಿರಪರಿಚಿತ. ಎರಡೂವರೆ ದಶಕಗಳಿಂದ ಈ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತ ಯೋಗದ ಮಹತ್ವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ಜನರು ಇವರಿಂದ ಯೋಗಾಭ್ಯಾಸ ಮಾಡುತ್ತ ಆರೋಗ್ಯ ವೃದ್ಧಿಸಿಕೊಂಡಿದ್ದಾರೆ. ಎಲ್ಲ ರೀತಿಯ ಮನೋವ್ಯಾಧಿ ಮತ್ತು ದೈಹಿಕವಾದ ಆರೋಗ್ಯ ಸಮಸ್ಯೆಗಳಿಗೆ ಮುದ್ರಾ ಮತ್ತು ಪ್ರಾಕೃತಿಕ ಚಿಕಿತ್ಸಾ ವಿಧಾನಗಳ ಮೂಲಕ ಸುಲಭ ಮತ್ತು ಸರಳ ಪರಿಹಾರ ಒದಗಿಸಲಾಗುತ್ತಿದೆ. ಪಿಸಿಒಡಿ, ಮಾನಸಿಕ, ದೈಹಿಕ ಒತ್ತಡ, ಖಿನ್ನತೆ, ಬೊಜ್ಜು, ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡ, ಮಧುಮೇಹ, ಅಸ್ತಮಾ, ಶ್ವಾಸಕೋಶ ತೊಂದರೆ, ಸೋರಿಯಾಸಿಸ್, ಮೂತ್ರಪಿಂಡ, ಮೂತ್ರದಲ್ಲಿ ಕಲ್ಲು, ಬೆನ್ನು ಮತ್ತು ಗಂಟಲು ನೋವು, ಸಂಧಿವಾತ, ಆಮವಾತ, ವೈರಾಣು ಸೋಂಕು, ಅಲರ್ಜಿ ಸೇರಿ ಅನೇಕ ಕಾಯಿಲೆಗಳಿಗೆ ಯೋಗ ಮತ್ತು ಯೋಗ ಚಿಕಿತ್ಸೆಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಡಾ.ಲತಾ ಶೇಖರ್.

ಎಲ್ಲಿದೆ ಯೋಗ ಕೇಂದ್ರ?: ಗಿರಿನಗರದ 8ನೇ ಮುಖ್ಯ ರಸ್ತೆಯಲ್ಲಿ ಡಾ.ಲತಾ ಶೇಖರ ಹೋಲಿಸ್ಟಿಕ್ ವೆಲ್ನೆಸ್ ಸೆಂಟರ್ ಹಾಗೂ ರಾಜರಾಜೇಶ್ವರಿ ನಗರದಲ್ಲಿ ನಿತ್ಯ ಸಂಜೀವಿನಿ ಯೋಗ ಪ್ರತಿಷ್ಠಾನ ಸ್ಥಾಪಿಸಲಾಗಿದೆ. ಈ ಸೆಂಟರ್​ಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವವರೆಗೆ ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಕ್ಯಾನ್ಸರ್, ಮಧುಮೇಹ, ರಕ್ತಹೀನತೆ, ಹೃದಯ ಸಮಸ್ಯೆದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಈಗಾಗಲೆ ಸಾವಿರಾರು ಜನರು ಯೋಗ ಮಾಡುತ್ತ ಹಲವು ಕಾಯಿಲೆಗಳಿಂದ ಗುಣಮುಖರಾಗಿದ್ದಾರೆ. ಮಹಿಳೆಯರು ಯೋಗ ಮಾಡುವುದರಿಂದ ಮಾನಸಿಕ ತೊಂದರೆ ಮತ್ತು ನಿಶ್ಯಕ್ತಿಯಿಂದ ವಿಮುಕ್ತಿ ಪಡೆಯಬಹುದು ಎನ್ನುತ್ತಾರೆ ಡಾ.ಲತಾ ಶೇಖರ್.

ಪ್ರಯೋಜನಗಳು: ಸಾತ್ವಿಕ ಆಹಾರಗಳಾದ ಸೊಪ್ಪು, ತರಕಾರಿ, ಬೆಳೆ ಕಾಳುಗಳು, ಹಣ್ಣು, ಜೇನು ತುಪ್ಪ, ಹಾಲು ಸೇರಿ ಗುಣಮಟ್ಟ ಆಹಾರ ಸೇವನೆಯಿಂದ ಮನುಷ್ಯನ ಆಯಸ್ಸು ವೃದ್ಧಿಯಾಗಲಿದೆ. ಯೋಗದಿಂದ ದೇಹ, ಮನಸ್ಸಿಗೆ ಶಾಂತಿ ಸಿಗುತ್ತದೆ. ಉಸಿರಾಟ ಕ್ರಿಯೆ ಮತ್ತು ಕಿಬ್ಬೊಟ್ಟೆಯಲ್ಲಿ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಕಾಲಿನ ಮಾಂಸಖಂಡ ಹಾಗೂ ಕೀಲುಗಳು ಸಡಿಲಗೊಳ್ಳುತ್ತದೆ. ಅಧಿಕ ರಕ್ತದೊತ್ತಡ, ಹಿಮ್ಮಡಿ ನೋವು, ಉಬ್ಬಿದ ಉದರ ಭಾಗ, ದೇಹದ ರಕ್ತಚಲನೆ ಉತ್ತಮ ಆಗುವುದರಿಂದ ನವತಾರುಣ್ಯನಂತೆ ದೇಹ ಕಂಗೊಳಿಸುತ್ತದೆ. ಶಿಸ್ತುಬದ್ಧ ಹಾಗೂ ಉತ್ತಮ ಜೀವನಕ್ಕೆ ಯೋಗ ಅತ್ಯಗತ್ಯ. ಪ್ರತಿ ನಿತ್ಯ ಅರ್ಧ ಗಂಟೆ ಯೋಗ, ಪ್ರಾಣಾಯಮ ಮತ್ತು ಧಾನ್ಯಕ್ಕೆ ಸಮಯ ಮೀಸಲಿಟ್ಟರೆ ಆರೋಗ್ಯಕರ ಜೀವನ ನಡೆಸಬಹುದು ಎಂದು ಡಾ.ಲತಾ ಶೇಖರ್ ಸಲಹೆ ನೀಡಿದರು.

ಮುದ್ರಾ ವಿಧಗಳು: ಪ್ರಾಣ, ಹೃದಯ, ಮೃತ್ಯು, ಆಕಾಶ, ವಾಯು, ಪೃಥ್ವಿ, ವರುಣ, ವ್ಯಾನ, ಗಣೇಶ, ಲಿಂಗ, ಶಂಖ, ಅಪಾನ, ಸಮಾನ, ಕಾಮಧೇನು, ಯೋನಿ, ಮುಷ್ಠಿ, ಶೂನ್ಯ, ಸೂರ್ಯ ಮುದ್ರ, ಚಿನ್ಮುದ್ರಾ, ಜಲೋದರ ನಾಶಕ ಮುದ್ರ, ಅಂಜಲಿ, ಮಕರ, ಶಕ್ತಿ, ಮಹಾಶೀರ್ಷ, ಶ್ವಾಸ, ಅಸ್ತಮಾ, ಕನಿಷ್ಠ, ಭ್ರಮರ, ಕ್ಷೇಪನ, ಪ್ರಸನ್ನ, ಹಸ್ತ, ಮಧ್ಯಮ, ಅನಾಮಿಕ ಮುದ್ರ, ಸಿಂಹಾಕ್ರಾಂತಂ, ಮಹಾಕ್ರಾಂತಂ, ಮುದ್ಗರಂ, ಪಲ್ಲವಂ, ಕೂರ್ಮ, ವರಾಹಕಂ, ಪ್ರಲಂಬಂ, ಮುಖೇನ್ಮುಖಂ, ಯಮಪಾಶಂ, ಗ್ರಂಥಿತಂ ಸೇರಿ ವಿವಿಧ ಬಗೆಯ ಮುದ್ರೆಗಳಿವೆ.

ಲತಾ ಶೇಖರ್ ವೈಶಿಷ್ಟ್ಯತೆಗಳು

  • 2,500ಕ್ಕೂ ಹೆಚ್ಚು ಕಾಸ್ಮಿಕ್ ಎನರ್ಜಿ ಹೀಲಿಂಗ್
  • 500ಕ್ಕೂ ಅಧಿಕ ಯೋಗ ಶಿಕ್ಷಕರ ತಯಾರು
  • ಲಕ್ಷಕ್ಕೂ ಹೆಚ್ಚು ಜನರಿಗೆ ಯೋಗಾಭ್ಯಾಸ
  • ಮುದ್ರಾ, ಪ್ರಾಕೃತಿಕ ಚಿಕಿತ್ಸೆ ಮೂಲಕ ರೋಗಗಳ ಗುಣಮುಖ
  • 200ಕ್ಕೂ ಹೆಚ್ಚು ಔಷಧ ಗುಣವುಳ್ಳ ಗಿಡಮೂಲಿಕೆಗಳಿಂದ ಕಷಾಯ ತಯಾರಿಕೆ
  • ಮಧುಮೇಹ ಸೇರಿ ಎಲ್ಲ ಬಗೆಯ ಕಾಯಿಲೆಗಳ ನಿವಾರಣೆ
  • ಕ್ಯಾನ್ಸರ್, ಎಚ್​ಐವಿ ಸೇರಿ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ವೃದ್ಧಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net