

ಜಾಗೃತಿ ಮೂಡಿಸುವ ಸಲುವಾಗಿ ಭಾನುವಾರ ಬೆಳಿಗ್ಗೆ ಯಲಹಂಕ ಕೆರೆ ಆವರಣದಲ್ಲಿ ನಡೆದ ‘ಫಿಟ್ ಇಂಡಿಯಾ - ಫಿಟ್ ಯಲಹಂಕ’ ಎಂಬ ಬೃಹತ್ ವಾಕಥಾನ್ ಆಯೋಜಿಸಲಾಗಿತ್ತು. ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ನಡೆದ ವಾಕಥಾನ್‌ನಲ್ಲಿ ಬಿಜೆಪಿಯ ಮುಖಂಡರು, ಕಾರ್ಯರ್ತಕರು, ಸಹಸ್ರಾರು ಜನರ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಎಸ್.ಆರ್.ವಿಶ್ವನಾಥ್, ಕೆರೆ ಸಂರಕ್ಷಣೆ ಮತ್ತು ಉತ್ತಮ ಆರೋಗ್ಯದ ಧ್ಯೇಯಕ್ಕಾಗಿ ವಾಕಥಾನ್ ಆಯೋಜಿಸಲಾಗಿತ್ತು. ಹತ್ತಾರು ಕೋಟಿ ಅನುದಾನದಲ್ಲಿ ಯಲಹಂಕ ಕೆರೆಯನ್ನು ಅಭಿವೃದ್ಧಿ ಪಡಿಸಿದ್ದು, ಕೆರೆಯ ಸೊಬಗು ಜನರನ್ನು ಕೈಬೀಸಿ ಕರೆಯುವಂತಿದೆ. ಇಂತಹ ಅಪೂರ್ವವಾದ ಕೆರೆಯನ್ನು ಜನತೆ ವೀಕ್ಷಿಸಬೇಕು, ತನ್ಮೂಲಕ ಕೆರೆಯ ಸಂರಕ್ಷಣೆಗೆ ಕಂಕಣಬದ್ಧರಾಗಬೇಕು ಎಂಬ ಸಂದೇಶ ಸಾರಲು ವಾಕಥಾನ್ ಆಯೋಜಿಸಲಾಗಿತ್ತು ಎಂದರು. ವಾಕಥಾನ್‌ನಲ್ಲಿ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಮುಖಂಡರಾದ ಅಲೋಕ್ ವಿಶ್ವನಾಥ್, ದಿಬ್ಬೂರು ಜಯಣ್ಣ, ಮುರಾರಿರಾಮು, ವಿ.ಪವನ್ ಕುಮಾರ್, ಈಶ್ವರ್, ವಿಶ್ವನಾಥಪುರ ಮಂಜುನಾಥ್, ವಿ.ವಿ.ರಾಮಮೂರ್ತಿ, ನರಸಿಂಹಮೂರ್ತಿ, ಮು.ಕೃಷ್ಣಮೂರ್ತಿ ಮತ್ತಿತರರು ಭಾಗಿಯಾಗಿದ್ದರು.
ಜು.24ರಂದು ನನ್ನ ಜನ್ಮದಿನದ ಪ್ರಯುಕ್ತ ವಿಶ್ವವಾಣಿ ಫೌಂಡೇಶನ್, ಬಿಜೆಪಿ ಯುವ ಮೋರ್ಚಾ, ಎಸ್.ಸಿ.ಮೋರ್ಚಾ ಯಲಹಂಕ ನಗರ ಹಾಗೂ ಗ್ರಾಮಾಂತರ ಮಂಡಲ ಮತ್ತು ರಾಷ್ಟ್ರೋತ್ಥಾನ ಪರಿಷತ್, ನಾರಾಯಣ ಹೃದಯಾಲಯ, ಲಯನ್ಸ್ ಕ್ಲಬ್, ಬಿಜೆಪಿ ವೈದ್ಯಕೀಯ ಪ್ರಕೋಷ್ಠ, ಸಪ್ತಗಿರಿ ಆಸ್ಪತ್ರೆ, ನೇತ್ರಧಾಮ, ಕೃಷ್ಣ ನೇತ್ರಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಸಿಂಗನಾಯಕನಹಳ್ಳಿಯ ರಮಡ ಹೋಟೆಲ್ನಲ್ಲಿ ಬೃಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ ಆಯೋಜಿಸಿದ್ದು, ಇದರಲ್ಲಿ ಹೃದಯ ಸಂಬಂಧಿ ಖಾಯಿಲೆ ಹಾಗೂ ಸೀಳು ತುಟಿ ಸಮಸ್ಯೆಗಳ ತಪಾಸಣೆ ಸೇರಿದಂತೆ ಹಲವು ಖಾಯಿಲೆಗಳ ತಪಾಸಣೆ ಕೈಗೊಳ್ಳಲಾಗುವುದು. ಹಾಗೆಯೇ ಶಾಲಾ ಮಕ್ಕಳಿಗೆ 1 ಲಕ್ಷ ಉಚಿತ ನೋಟ್ ಪುಸ್ತಕಗಳ ವಿತರಣೆ, ವಿಶೇಷ ಚೇತರಿಗೆ 30 ತ್ರಿಚಕ್ರ ವಾಹನಗಳ ವಿತರಣೆ, ಪತ್ರಿಕಾ ವಿತರಕ ಹುಡುಗರಿಗೆ 50 ಬೈಸಿಕಲ್ಗಳ ವಿತರಣೆ, ಹೊಲಿಗೆ ತರಬೇತಿ ಪಡೆದಿರುವ ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ, ಬ್ಯೂಟಿಷಿಯನ್ ತರಬೇತಿ ಪಡೆದ ಮಹಿಳೆಯರಿಗೆ ಸಲಕರಣೆಗಳ ವಿತರಣೆ ಸೇರಿದಂತೆ ಹಲವು ನೆರವು ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು.