ಮೀನುಗಾರಿಕೆ ಬೋಟ್ ಮುಳುಗಡೆ

Boat drown
Published on

ಹೊನ್ನಾವರ/ಕೋಟ: ಶರಾವತಿ ನದಿ ಅರಬ್ಬಿ ಸಮುದ್ರ ಸೇರುವ ಸಂಗಮ ಸ್ಥಳದಲ್ಲಿ ಗಂಗೊಳ್ಳಿ ಮೂಲದ ಶ್ರೀ ಕೃಷ್ಣ ಭಂಡಾರಿ ಹೆಸರಿನ ಶಿವರಾಮ ಶ್ರೀಯಾನ್ ಮಾಲೀಕತ್ವದ ಬೋಟ್ ಮುಳುಗಡೆಯಾಗಿದೆ.

ಎರಡು ದಿನಗಳ ಹಿಂದೆ ಆಳ ಸಮುದ್ರ ಮೀನುಗಾರಿಕೆಗೆ ಹೋಗಿದ್ದ ಬೋಟ್ ಶುಕ್ರವಾರ ವಾಪಸ್ ಕಾಸರಕೋಡ ಬಂದರು ಪ್ರದೇಶಕ್ಕೆ ಆಗಮಿಸುವ ವೇಳೆ ತೀವ್ರ ಗಾಳಿ ಮತ್ತು ಅಲೆಯ ರಭಸಕ್ಕೆ ಸಿಲುಕಿ ಈ ದುರ್ಘಟನೆ ಸಂಭವಿಸಿದೆ.

ಇಂಜಿನ್ ಮತ್ತು ಪರಿಕರಗಳು ಸಂಪೂರ್ಣ ಹಾನಿಗೀಡಾಗಿವೆ. ಅಪಾರ ಪ್ರಮಾಣದ ಮೀನು ಕೂಡ ಸಮುದ್ರ ಪಾಲಾಗಿದೆ. ಬೋಟ್ ಮುಳುಗುತ್ತಿದ್ದಂತೆ ಮೀನುಗಾರರು ನೀರಿಗೆ ಹಾರಿದ್ದಾರೆ. ಈ ವೇಳೆ ಬೇರೊಂದು ಬೋಟ್‌ನಲ್ಲಿದ್ದ ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು ರಕ್ಷಿಸಿ ದಡ ಸೇರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net