

ಮಂಗಳೂರು: ಕಾಪು ಲೈಟ್ ಹೌಸ್ ಬಳಿ ಬುಧವಾರ ಬೆಳಗ್ಗೆ ಮೀನುಗಾರಿಕಾ ದೋಣಿಯ ಇಂಜಿನ್‌ನಲ್ಲಿ ಉಂಟಾದ ದೋಷದಿಂದ ಗಾಳಿಯ ರಭಸಕ್ಕೆ ಬಂಡೆಗೆ ಗುದ್ದಿ ಮಗುಚಿ ಬಿದ್ದು, ಅದರಲ್ಲಿದ್ದ ಐವರು ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ಮೀನುಗಾರರು ಈಜಾಡಿ ಸಮುದ್ರದ ಬದಿಯಲ್ಲಿದ್ದ ದಂಡೆಯಲ್ಲಿ ರಕ್ಷಣೆ ಪಡೆದಿದ್ದಾರೆ. ಮಂಗಳೂರಿನಿಂದ ಮೀನುಗಾರಿಕೆಗೆ ಹೋಗಿದ್ದ ಮೀನುಗಾರರು ಅವರನ್ನು ರಕ್ಷಿಸಿದ್ದಾರೆ. ರಕ್ಷಣೆಗೊಳಗಾದವರು ಮಲ್ಪೆಯಿಂದ ಮೀನುಗಾರಿಕೆಗೆ ಬಂದಿದ್ದರು. ಅವರು ಹಿಂತಿರುಗಿ ಮಲ್ಪೆಗೆ ತೆರಳಿದ್ದಾರೆ.