ಮೊಬೈಲ್‌ ಕದ್ದಿದ್ದಕ್ಕೆ ದೋಣಿಯಲ್ಲಿ ತಲೆಕೆಳಗಾಗಿ ಕಟ್ಟಿ ಅಮಾನವೀಯತೆ ಮೆರೆದರು!

fisherman
Published on

ಮಂಗಳೂರು: ಮೊಬೈಲ್‌ ಕದ್ದಿರುವ ಆರೋಪದಲ್ಲಿ ಯುವಕನನ್ನು ಕ್ರೇನ್‌ಗೆ ತಲೆಕೆಳಗಾಗಿ ಕಟ್ಟಿ ಹಲ್ಲೆ ನಡೆಸಿರುವ ಎದೆ ಝಲ್ಲೆನೆಸುವ ಕೃತ್ಯವೊಂದರ ವಿಡಿಯೋ ಬಹಿರಂಗಗೊಂಡಿದೆ.
ಮಂಗಳೂರಿನ ಮೀನುಗಾರಿಕಾ ಜೆಟ್ಟಿಯಲ್ಲಿದ್ದ ಬೋಟ್‌ವೊಂದರಲ್ಲಿ ಕೆಲದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು ಪೊಲೀಸರು ಗಮನಕ್ಕೆ ಬರುತ್ತಿರುವಂತೆಯೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಒಳಗೊಂಡವರೆಲ್ಲರೂ ಮೂಲತಃ ಆಂಧ್ರಪ್ರದೇಶದ ಕಾರ್ಮಿಕರು.
ದೋಣಿಯ ಕ್ರೇನ್‌ನ ಹುಕ್‌ಗೆ ಹಗ್ಗದಲ್ಲಿ ಯುವಕನನ್ನು ತಲೆಕೆಳಗಾಗಿ ಕಟ್ಟಿ ಮೊಬೈಲ್‌ ಎಲ್ಲಿದೆ ಹೇಳು ಇಲ್ಲವಾದರೆ ಕೊಲ್ಲುತ್ತೇವೆ ಎಂದು ತಮಿಳು ಮತ್ತು ತೆಲುಗಿನಲ್ಲಿ ಮಾತನಾಡುತ್ತಿರುವ ದೃಶ್ಯಾವಳಿ ವಿಡಿಯೊ ಕ್ಲಿಪ್ಪಿಂಗ್‌ನಲ್ಲಿ ಇದೆ.
ದೌರ್ಜನ್ಯಕ್ಕೆ ಒಳಗಾಗಿರುವ ಯುವಕನನ್ನು ವೈಲಾ ಶೀನು(೩೪) ಎಂದು ಗುರುತಿಸಲಾಗಿದೆ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net