ಕುಡಿತ ಮತ್ತಿನಲ್ಲಿ ಮೀನುಗಾರನ ಹತ್ಯೆ

Murder scene theme vector illustration. All design elements are layered.
Murder scene theme vector illustration. All design elements are layered.
Published on

ಉಡುಪಿ: ಪಿತ್ರೋಡಿಯ ದತ್ತಾತ್ರೆಯ ಭಜನಾ ಮಂದಿರದ ರಸ್ತೆಯಲ್ಲಿ ಕ್ಷುಲಕ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.


ತಾಂಡೇಲವೃತ್ತಿಯಲ್ಲಿದ್ದ ದಯಾನಂದ ಸಾಲ್ಯಾನ್ (48) ಮೃತರು.

ಫಿಶ್‌ಮಿಲ್ ಕಾರ್ಮಿಕ ಭರತ್ ಹಾಗೂ ದಯಾನಂದ್ ಮಧ್ಯೆ ಯಾವುದೋ ವಿಷಯದ ಬಗ್ಗೆ ಮಾತುಕತೆ ನಡೆಸಿದ್ದು, ಪರಸ್ಪರ ಕೈಮಿಲಾಯಿಸಿದ್ದರು. ಬಳಿಕ ಬಾರ್‌ನಿಂದ ಹೊರ ಬಂದು ರಸ್ತೆಯಲ್ಲಿ ಗಲಾಟೆ ಮಾಡಿದ್ದು, ಸಿಟ್ಟಿನ ಭರದಲ್ಲಿ ಭರತ್ ತನ್ನ ಕೈಯಲ್ಲಿದ್ದ ಪಂಚ್‌ನಿಂದ ದಯಾನಂದ ಅವರ ಮುಖಕ್ಕೆ ಹೊಡೆದು ಓಡಿ ಹೋಗಿದ್ದಾನೆ. ಗಂಭೀರ ಗಾಯಗೊಂಡು ಕುಸಿದು ಬಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜವಾಗಿಲ್ಲ. ಕಾಪು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿ ಭರತ್‌ನನ್ನು ಶುಕ್ರವಾರ ಮುಂಜಾನೆ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net