ಮೀನು ಹಿಡಿಯಲು ತೆರಳಿದ್ದ ಇಬ್ಬರು ನಾಪತ್ತೆ, ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾರ್ಯಾಚರಣೆ

fishermen
Published on
ಬೆಳ್ತಂಗಡಿ: ನಗರ ಪಂಚಾಯತ್ ಪಂಪ್ ಹೌಸ್ ಬಳಿ ನಿನ್ನೆ ಸಂಜೆ ಮೀನು ಹಿಡಿಯಲು ಬಂದ್ದ ವ್ಯಕ್ತಿಗಳಿಬ್ಬರು  ನಾಪತ್ತೆಯಾದ  ಹಿನ್ನೆಲೆ ಬೆಳ್ತಂಗಡಿ  ಸೋಮಾವತಿ ನದಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಉಜಿರೆ ಸಮೀಪದ ವ್ಯಕ್ತಿಗಳಿಬ್ಬರು ನಿನ್ನೆ ಸಂಜೆ ಮೀನು ಹಿಡಿಯಲು ನದಿಗೆ ಸಮೀಪ ಬಂದಿದ್ದು ಅವರು ತಂದಿರುವ ಬಲೆ ಹಾಗೂ ಬಟ್ಟೆಬರೆ ಮೊಬೈಲ್ ನದಿ ದಡದಲ್ಲಿ ಪತ್ತೆಯಾಗಿದೆ‌, ಆದ್ದರಿಂದ ಇಬ್ಬರೂ ಮುಳುಗಿರುವ ಸಂಶಯದಲ್ಲಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net