ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಎದೆನೋವಿನಿಂದ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. ತಾಲೂಕಿನ ಮಾವಿನಕುರ್ವೆ ನಿವಾಸಿ ನಿತ್ಯಾನಂದ ದೇವಯ್ಯ ಖಾರ್ವಿ (40) ಮೃತಪಟ್ಟ ವ್ಯಕ್ತಿ.
ಮಂಗಳವಾರ ಬೆಳಗಿನ ಜಾವ ಪಾತಿದೋಣಿಯಲ್ಲಿ ಸಮುದ್ರಕ್ಕೆ ತೆರಳಿದ್ದರು. ದೋಣಿಯಲ್ಲೇ ಎದೆನೋವು ಕಾಣಿಸಿತು. ಅವರನ್ನು ತಕ್ಷಣ ದಡಕ್ಕೆ ತಂದು, ಭಟ್ಕಳ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾರೆ. ಗಂಗಾಧರ ಓಮಯ್ಯ ಖಾರ್ವಿ ಭಟ್ಕಳ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.