ನೀರಿಗೆ ಬಿದ್ದು ಮೀನುಗಾರ ಸಾವು

boy death
Published on

ಕಾಸರಗೋಡು: ದೋಣಿಯಲ್ಲಿ ಮೀನು ಹಿಡಿಯುವ ಸಂದರ್ಭ ಆಯತಪ್ಪಿ ನೀರಿಗೆ ಬಿದ್ದು ಪಡನ್ನ ವಡಕ್ಕೇಪುರ ನಿವಾಸಿ ದಿವಾಕರನ್(63) ಎಂಬುವರು ಮೃತಪಟ್ಟಿದ್ದಾರೆ. ಓರಿ ಪುಲ್ಲೂರ್‌ಮಾಡ್ ಹೊಳೆಯಲ್ಲಿ ಮೀನು ಹಿಡಿಯುವ ಮಧ್ಯೆ ಭಾನುವಾರ ಬೆಳಗ್ಗೆ ನೀರಿಗೆ ಬಿದ್ದಿದ್ದರು. ತಕ್ಷಣ ಸ್ಥಳೀಯರು ಅಗ್ನಿಶಾಮಕದಳದ ಸಹಾಯದೊಂದಿಗೆ ಹುಡುಕಾಟ ನಡೆಸಿದ್ದು, ಸಂಜೆ ವೇಳೆ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಾಞಂಗಾಡು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net