

ಕುಮಟಾ: ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ನಡೆಸುವಾಗ ಆಯತಪ್ಪಿ ನದಿಗೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ತಾಲೂಕಿನ ದಿವಗಿಯಲ್ಲಿ ನಡೆದಿದೆ.
ದಿವಗಿ ಕೆಳಗಿನಕೇರಿ ನಿವಾಸಿ ನಾರಾಯಣ ಶಿವಪ್ಪ ಅಂಬಿಗ (60) ಮೃತ ವ್ಯಕ್ತಿ. ಅಘನಾಶಿನಿ ನದಿಯಲ್ಲಿ ದೋಣಿ ಮೇಲೆ ನಿಂತು ಬಲೆ ಬೀಸುವಾಗ ಆಕಸ್ಮಿಕವಾಗಿ ಕಾಲುಜಾರಿ ಬಲೆ ಸಮೇತ ನದಿಗೆ ಬಿದ್ದಿದ್ದಾರೆ. ಬಲೆಯಲ್ಲಿ ಸಿಲುಕಿಕೊಂಡು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.