ಕೊಪ್ಪಳ: ಮೀನುಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ವಿವಿಧ ಕಾರ್ಯಕ್ರಮದಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಲಕರಣೆ, ಕಿಟ್ ಖರೀದಿಗೆ ಸಹಾಯಧನ, ಮೀನುಮರಿ ಖರೀದಿಗೆ ಸಹಾಯಧನ, ಕೆರೆಯ ಹಂಚಿನಲ್ಲಿ ಮೀನುಮರಿ ಪಾಲನಾ ಕೊಳ ನಿಮಾರ್ಣಕ್ಕೆ ಸಹಾಯಧನ, ಮೀನುಕೊಳ ನಿಮಾರ್ಣಕ್ಕೆ ಸಹಾಯಧನ, ಮತ್ಸವಾಹಿನಿ ಯೋಜನೆಯಡಿ ಅರ್ಹರು ಆ.30ರೊಳಗೆ ಆಯಾ ತಾಲೂಕು ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಆಯಾ ಇಲಾಖೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದೆಂದು ಉಪ ನಿರ್ದೇಶಕರು ತಿಳಿಸಿದ್ದಾರೆ.