ಮರಕ್ಕೆ ಡಿಕ್ಕಿಯಾದ ಮೀನು ಲಾರಿ ಒಬ್ಬ ಸಾವು

Road-accident-in-Ankola
Published on

ಅಂಕೋಲಾ: ಮೀನು ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಭಾವಿಕೇರಿ ಗ್ರಾಪಂ ವ್ಯಾಪ್ತಿಯ ಗಾಬಿತಕೇಣಿಯ ನಿವಾಸಿ ಮನೋಹರ ದಶರಥ ಭೋತೆ (60) ಮೃತ ವ್ಯಕ್ತಿ.

ಬುಧವಾರ ಗಾಬೀತಕೇಣಿಯ ಮೀನು ವ್ಯಾಪಾರಿ ಸುರೇಶ ರೇವಣಕರ ಅವರಿಗೆ ಸಂಬಂಧಿಸಿದ ಮೀನುಗಳನ್ನು ಬೆಳಗಾವಿ ಮೀನು ಮಾರುಕಟ್ಟೆಯಲ್ಲಿ ಖಾಲಿ ಮಾಡಿ ಅಂಕೋಲಾಕ್ಕೆ ಬರುತ್ತಿದ್ದ ವೇಳೆ ಟಾಟ್‌ಏಸ್ ವಾಹನದ ಸ್ಟೇರಿಂಗ್ ಲಾಕ್ ಆಗಿದೆ ಎನ್ನಲಾಗಿದ್ದು, ಅಪಘಾತ ಸಂಭವಿಸಿದೆ. ಚಾಲಕ ರೋಶನ್ ಭಟ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತನಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಗಾಬೀತಕೇಣಿಯಲ್ಲಿ ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net