ತಂಗಳಗೆರೆಯಲ್ಲಿ ಮೀನುಗಳ ಸಾವು: ಲಕ್ಷಾಂತರ ರೂ ನಷ್ಟ

Fish deaths in Thangalagere village Mandya
Published on

ಮಂಡ್ಯ: ತಾಲೂಕಿನ ತಂಗಳಗೆರೆ ಗ್ರಾಮದಲ್ಲಿ ಸಾವಿರಾರೂ ಮೀನುಗಳು ಮೃತಪಟ್ಟಿದ್ದು, ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ದಾಸಯ್ಯ ಎಂಬುವರು ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆಯಡಿ 12 ಸಾವಿರ ಮೀನುಗಳನ್ನು ಸಾಕಾಣೆ ಮಾಡುತ್ತಿದ್ದರು. ಹದಿನೈದು ದಿನದಲ್ಲಿ ಮಾರಾಟ ಮಾಡಬೇಕಿತ್ತು. ಆದರೆ ಅ.3ರಂದು ಸಾವಿರಾರೂ ಮೀನುಗಳು ಸತ್ತು ಹೋಗಿವೆ. ಪರಿಣಾಮ ಲಕ್ಷಾಂತರ ರೂ ನಷ್ಟವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ವಹಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net