

ಹಾವೇರಿ: ಮೀನು ಹಿಡಿಯಲು ಹೋದ ವ್ಯಕ್ತಿ ಕೆರೆಯೊಳಗೆ ಮೀನಿನ ಬಲೆಯಲ್ಲಿ ಸಿಲುಕಿ ಮೃತಪಟ್ಟ ಘಟನೆ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮಾಲತೇಶ ಫಕ್ಕೀರಪ್ಪ ಬಸ್ತಿ (54) ಮೃತ ವ್ಯಕ್ತಿ.
ಈತ ಮೀನು ಹಿಡಿಯುವ ಸಲುವಾಗಿ ಗ್ರಾಮದ ದೊಡ್ಡಕೆರೆಯಲ್ಲಿ ಬಲೆ ಹಾಕಿದ್ದರು. ನಂತರ ಮೀನು ತೆಗೆಯುವ ಸಲುವಾಗಿ ನೀರಿಗೆ ಇಳಿದಾಗ ಬಲೆಯಲ್ಲಿ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.