ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳಗಿ ಸಾವು

Crime Logo
Published on

ಶಿಗ್ಗಾಂವಿ: ಮೀನು ಹಿಡಿಯಲು ಬಲೆ ಹಾಕುತ್ತಿದ್ದ ಸಮಯದಲ್ಲಿ ನೀರಿನಲ್ಲಿ ಮುಳಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹೊಸೂರ ಗ್ರಾಮದ ರಾಮನಕಟ್ಟೆ ಕೆರೆಯಲ್ಲಿ ಮಂಗಳವಾರ ನಡೆದಿದೆ.

ತಾಲೂಕಿನ ಹಿರೇಮಣಕಟ್ಟೆ ಗ್ರಾಮದ ಮಾಬುಸಾಬ ಮೌಲಾಸಾಬ ಇಂಗಳಗಿ (46) ಮೃತ ವ್ಯಕ್ತಿ.

ಈತ ಕೆರೆಯಲ್ಲಿ ಮೀನು ಹಿಡಿಯುವ ಸಲುವಾಗಿ ಬಲೆ ಹಾಕುತ್ತಿದ್ದಾಗ ಬಲೆಯೂ ಕಾಲಿಗೆ ಸಿಲುಕಿ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ತಡಸ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net