ನಾಳೆ ದೊಡ್ಡಬಳ್ಳಾಪುರ ಮತ್ಸೃದರ್ಶಿನಿ ಉದ್ಘಾಟನೆ

fish canteen
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮೀನುಗಾರಿಕಾ ಉದ್ಯಮಕ್ಕೆ ಮತ್ತಷ್ಟು ವೇಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಮತ್ಸೃಸಂಪದ ಯೋಜನೆಯಡಿ ಜಿಲ್ಲೆಯಲ್ಲಿ ಆರಂಭವಾಗಿರುವ ಮೊಟ್ಟಮೊದಲ ಮೀನು ಖಾದ್ಯ ಕ್ಯಾಂಟೀನ್ ಅನ್ನು ಜು.10 ರಂದು ಕೇಂದ್ರ ಸಚಿವರು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ.
ಕೇಂದ್ರ ಸರ್ಕಾರದ ಮತ್ಸಸಂಪದ ಹೆಸರಿನಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೌಲ್ಯವರ್ಧಿತ ಮೀನುಖಾದ್ಯ ಉತ್ಪನ್ನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಯೋಜನೆಯಾಗಿದ್ದು, ರಾಜ್ಯದಲ್ಲಿ ಮೊದಲನೇ ಘಟಕವಾಗಿ ಕೊಡಗು ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಏಕಕಾಲದಲ್ಲಿ ವರ್ಚುವಲ್ ಮೂಲಕ ಉದ್ಘಾಟಿಸಲಾಗುತ್ತಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಸಾಂಕೇತಿಕ ಉದ್ಘಾಟನೆ ಹಮ್ಮಿಕೊಂಡಿದ್ದು ಇದರಡಿ ಅದೇ ದಿನ ಎರಡೂ ಜಿಲ್ಲೆಗಳಲ್ಲಿ ಮತ್ಸೃದರ್ಶಿನಿಗೆ ಅಧಿಕೃತ ಚಾಲನೆ ದೊರೆಯಲಿದೆ.
ರಾಜ್ಯದಲ್ಲೇ 2ನೇ ಕ್ಯಾಂಟೀನ್:
ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ವಿನಾಯಕನಗರದಲ್ಲಿ ಮತ್ಸೃದರ್ಶಿನಿ ಹೆಸರಿನಲ್ಲಿ ಕಾರ್ಯಾರಂಭಗೊಂಡಿರುವ ಮೀನುಗಾರಿಕೆ ಇಲಾಖೆಯ ಕ್ಯಾಂಟೀನ್ ರಾಜ್ಯದಲ್ಲೇ ಎರಡನೇಯದಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ಗ್ರಾಮಾಂತರ ಜಿಲ್ಲಾ ಮೀನುಗಾರಿಕೆ ಇಲಾಖೆ ವತಿಯಿಂದ ಸುಸಜ್ಜಿತ ಕ್ಯಾಂಟೀನ್ ನಿರ್ಮಾಣವಾಗಿದ್ದು, 12ಕ್ಕೂ ಹೆಚ್ಚು ವಿವಿಧ ಜಾತಿಯ ಮೀನುಖಾದ್ಯ ಲಭ್ಯವಿದೆ.


ಪ್ರಧಾನಮಂತ್ರಿ ಮತ್ಸೃಸಂಪದ ಯೋಜನೆಯಡಿ ಮೀನುಖಾದ್ಯ ಕ್ಯಾಂಟೀನ್ ಆರಂಭ ಮಾಡಲಾಗಿದೆ, ರಾಜ್ಯದಲ್ಲೇ ಇದು ಮೊದಲ ಘಟಕದ ಎರಡನೇ ಕ್ಯಾಂಟೀನ್ ಆಗಿದ್ದು, ಕೇಂದ್ರ ಸಚಿವರು ಜು.10ರಂದು ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಇದಕ್ಕಾಗಿ ಜಿಲ್ಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಾಗರಾಜ್, ಉಪನಿರ್ದೇಶಕ, ಮೀನುಗಾರಿಕೆ ಇಲಾಖೆ ಬೆಂಗಳೂರು ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net