ವಿಭಾಗ ಮಟ್ಟಕ್ಕೆ ಆಯ್ಕೆ ರೇಖಲಗೆರೆ ಲಂಬಾಣಿಹಟ್ಟಿ ವಿದ್ಯಾರ್ಥಿಗಳು

CTD DYAAAAAAAAAAAA
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಚಿತ್ರದುರ್ಗ: ಶಿಕ್ಷಣ ಮತ್ತು ಡಯಟ್ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಚಳ್ಳಕೆರೆ ತಾ. ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ನೋಡಲ್ ಅಧಿಕಾರಿ ಬಿ.ಎಸ್.ನಿತ್ಯಾನಂದ ತಿಳಿಸಿದರು.

ಚಿತ್ರದುರ್ಗ ತಾಲೂಕು ಚವಲಿಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ದ್ವಿತೀಯ,ಹಿರಿಯೂರು ತಾಲೂಕು ಮಸ್ಕಲ್ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿರುತ್ತಾರೆ.

ಶಿಕ್ಷಕಿ ಆರ್.ಶೋಭಾ ಉತ್ತಮ ನಿರ್ದೇಶಕಿ,ಶಿಕ್ಷಕ ವೈ.ಜಗದೀಶ್ ಉತ್ತಮ ನಾಟಕ ರಚನೆಕಾರ,ವಿದ್ಯಾರ್ಥಿಗಳಾದ ನಿತೀಶ್ ಉತ್ತಮ ನಟ, ಮೇಘ ಉತ್ತಮ ನಟಿ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದ ಆಂಜನೇಯ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾ ಗ)ಜೆ.ಅಂಜಮ್ಮ ಪ್ರಥಮ,ಹಿರಿಯೂರು ತಾಲೂಕು ಅಂಬಲಗೆರೆ ಸರ್ಕಾರಿ ಪ್ರೌಢಶಾಲೆ ಎಸ್.ಎನ್.ನಿತ್ಯಾಶ್ರೀ ದ್ವಿತೀಯ ಹಾಗೂ ಚಳ್ಳಕೆರೆ ತಾಲೂಕು ಮಹಾತ್ಮಗಾಂಧಿ ಪ್ರೌಢಶಾಲೆ ಎನ್.ತ್ರಿಶಾ ತೃತೀಯ ಸ್ಥಾನ ಗಳಿಸಿದ್ದಾರೆ.

ವಿಜೇತರಿಗೆ ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಪ್ರಶಸ್ತಿ ಪತ್ರ ವಿತರಿಸಿದರು. ಉಪನ್ಯಾಸಕರಾದ ಕೆ.ಜಿ.ಪ್ರಶಾಂತ್,ಎಸ್.ಬಸವರಾಜು, ತೀರ್ಪುಗಾರರಾದ ದಾಸೇಗೌಡ, ಚಂದ್ರಾರೆಡ್ಡಿ,ರಾಮಶೇಖರ್,ಡಾ.ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net