

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಗ್ರಾಮದಲ್ಲಿ ಅರಳಿಕಟ್ಟೆಗೆ ಪೂಜೆ ಸಲ್ಲಿಸಿದರೆ, ನಾಗರದೋಷ ಪರಿಹಾರವಾಗುತ್ತದೆ. ಗ್ರಾಮಕ್ಕೂ ಒಳಿತಾಗುತ್ತದೆ ಎಂಬ ನಂಬಿಕೆ ಇದೆ ಎಂದು ನಲ್ಲೂರು ರೇಷ್ಮೆ ಬೆಳೆಗಾರರ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕ ವಕೀಲ ಆನಂದ್ ಹೇಳಿದರು.
ಹೋಬಳಿಯ ನಲ್ಲೂರು ಗ್ರಾಮದಲ್ಲಿ ಅರಳಿಕಟ್ಟೆ ಸ್ಥಾಪನೆಯ ಮೊದಲನೇ ವರ್ಷದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಳಿಕಟ್ಟೆ ಗ್ರಾಮಗಳಿಗೆ ಒಂದು ನ್ಯಾಯಸ್ಥಾನ ಇದ್ದಂತೆ, ಹಿಂದಿನ ಕಾಲದಿಂದಲೂ ಇದಕ್ಕೆ ತುಂಬಾ ಪ್ರಾಮುಖ್ಯ ನೀಡುತ್ತಿದ್ದರು. ಈಗಲೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಳೆಯ ಅರಳಿಕಟ್ಟೆ ಜೀರ್ಣೋದ್ಧಾರದಿಂದ ಗ್ರಾಮಕ್ಕೆ ಒಳಿತಾಗುತ್ತದೆ ಎಂದರು.
ಬೆಳಗ್ಗೆಯಿಂದ ಸಂಜೆವರೆಗೂ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮಸ್ಥರು ದೇವರ ದರ್ಶನ ಪಡೆದರು.
ಅರ್ಚಕ ಅಂಜಿನಪ್ಪ, ನಾಗರಾಜ್, ನಾಗೇಶ್, ನಿವೃತ್ತ ಯೋಧ ರಾಮಚಂದ್ರ, ನಾರಾಯಣ ಆಚಾರ್, ಲೋಕೇಶ್ ಇದ್ದರು.