

ವಿರಾಜಪೇಟೆ : ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದ ಮುಂಭಾಗದ ಆಟೋ ನಿಲ್ದಾಣ ವೈಫೈ ಸೌಲಭ್ಯದೊಂದಿಗೆ ನವೀಕೃತಗೊಂಡಿದ್ದು, ಭಾನುವಾರ ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಭಾನುವಾರ ಉದ್ಘಾಟನೆ ನೆರವೇರಿಸಿದರು.
ಆಧುನಿಕ ಸೌಲಭ್ಯ ಒಗೊಂಡ ಜಿಲ್ಲೆಯ ಮೊದಲ ಆಟೋ ನಿಲ್ದಾಣದಲ್ಲಿ ವೈಫೈ ಸಂಪರ್ಕ, ಮೊಬೈಲ್ ಚಾರ್ಜರ್ ಸಂಪರ್ಕಕ್ಕೆ ಸ್ವಿಚ್ ಒತ್ತುವ ಮೂಲಕ ಚಾಲನೆ ನೀಡಿ ಮಾತನಾಡಿದ ಶಾಸಕರು, ಇಂತಹ ಜನೋಪಯೋಗಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳ ಸಹಕಾರ ಅಗತ್ಯವಿದೆ ಎಂದರು.
ಜಿಲ್ಲೆಯಲ್ಲಿ ಆಧುನಿಕ ಸೌಲಭ್ಯ ಒಳಗೊಂಡ ಮೊದಲ ಆಟೋ ನಿಲ್ದಾಣ ಇದಾಗಿದ್ದು, ಸಾರ್ವಜನಿಕರು, ಆಟೋಚಾಲಕರು, ಪ್ರಯಾಣಿಕರು ಉಚಿತವಾಗಿ ವೈಫೈ ಸೌಲಭ್ಯ ಬಳಸಬಹುದಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇದೇ ವೇಳೆ ಆಟೋ ಚಾಲಕರ ಸಂಘದಿಂದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಗೌರವಿಸಲಾಯಿತು. ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ, ಪುರಸಭೆ ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಮೊಹಮ್ಮದ್ ರಾಫಿ, ಎಚ್.ಎಸ್ ಮತೀನ್, ಅಬ್ದುಲ್ ಜಲೀಲ್, ವಿ.ಅರ್. ರಜನಿಕಾಂತ್, ಡಿ.ಪಿ.ರಾಜೇಶ್, ಆಟೋ ಚಾಲಕ ಸಂಘದ ಶಶಿಧರನ್ ಸೇರಿದಂತೆ ಪದಾಧಿಕಾರಿಗಳು ಇದ್ದರು.