ಮೊದಲು ಶಾಸಕರ ಹೆಸರು ಬಹಿರಂಗಪರಿಸಿ; ಕೆ.ಎಂ.ಗಣೇಶ್

149a2c4a-0176-4195-baec-f7f13e788c1c
Published on


ಮಡಿಕೇರಿ: ಜೆಡಿಎಸ್, ಬಿಜೆಪಿ ಪಕ್ಷದಿಂದ ೨೦ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದಿರುವ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿಕೆಗೆ ಟಾಂಗ್ ನೀಡಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಮೊದಲು ಶಾಸಕರ ಹೆಸರು ಬಹಿರಂಗಪಡಿಸುವಂತೆ ಸವಾಲೆಸೆದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗಲು ಮಾತ್ರ ಕಾಂಗ್ರೆಸ್‌ನಂತೆ ತೋರ್ಪಡಿಕೆಯ ನಾಟಕವಾಡುವವರು ರಾತ್ರಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷವೇ ಬಿಜೆಪಿಯ ’ಬಿ’ ಟೀಂ ಆಗಿದ್ದು, ಜಾತ್ಯಾತೀತ ಚಿಂತನೆಯುಳ್ಳ ಜೆಡಿಎಸ್, ವಿರೋಧ ಪಕ್ಷವಾಗಿಯೇ ಇದೆ. ಮೊದಲು ಕಾಂಗ್ರೆಸ್ ಪಕ್ಷದೊಳಗಿನ ಗೊಂದಲ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಿ ಎಂದು ಟೀಕಿಸಿದರು.


ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಘಟಕ ಉಪಾಧ್ಯಕ್ಷ ಶರೀಫ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಾವತಿ, ಜಿಲ್ಲಾ ವಕ್ತಾರೆ ಗುಲಾಬಿ ಜನಾರ್ಧನ್, ವಿರಾಜಪೇಟೆ ತಾಲೂಕು ಉಪಾಧ್ಯಕ್ಷ ರವಿ ಮಾದಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net