22ರಂದು ಪ್ರಥಮ ತಾಲೂಕು ಅಧಿವೇಶನ : ಅಭಾಸಾಪ ತೆಂಕಣದಲ್ಲಿ ನುಡಿ ದಿಬ್ಬಣ ಕಾರ್ಯಕ್ರಮ

Published on

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಪ್ರಥಮ ತಾಲೂಕು ಅಧಿವೇಶನ ’ತೆಂಕಣದಲ್ಲಿ ನುಡಿ ದಿಬ್ಬಣ’ ಎಂಬ ಹೆಸರಿನಲ್ಲಿ ನಡ ಗ್ರಾಮದಲ್ಲಿರುವ ಕುತ್ರೊಟ್ಟು ಬಲಿಪ ರೆಸಾರ್ಟ್‌ನಲ್ಲಿ ಡಿ.22ರಂದು ನಡೆಯಲಿದೆ ಎಂದು ಪರಿಷತ್‌ನ ತಾಲೂಕು ಸಮಿತಿ ಅಧ್ಯಕ್ಷ ಪ್ರೊ.ಗಣಪತಿ ಭಟ್ ಕುಳಮರ್ವ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿವೇಶನವನ್ನು ಬೆಳಗ್ಗೆ 9.30ಕ್ಕೆ ಲೋಕಾಯುಕ್ತ ಎಸ್.ಪಿ.ಕುಮಾರಸ್ವಾಮಿ ಎ. ಉದ್ಘಾಟಿಸಲಿದ್ದಾರೆ. ಎರಡು ಉಪನ್ಯಾಸಗಳಿದ್ದು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಎನ್ನುವ ವಿಷಯದಲ್ಲಿ ಯಕ್ಷಗಾನ ಕವಿ, ಅರ್ಥದಾರಿ ದಿವಾಕರ ಹೆಗಡೆ ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯದೊಲವು ಎನ್ನುವ ವಿಷಯದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿಯವರು ಉಪನ್ಯಾಸ ನೀಡಲಿದ್ದಾರೆ. ತಾಲೂಕು ಹಾಗೂ ಜಿಲ್ಲೆಯ ಹೆಸರಾಂತ ಸಾಹಿತಿಗಳು, ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದರು.

ಒಂದು ಅವಧಿಯು ಕವಿ ಸಮ್ಮಿಲನವಾಗಿದ್ದು ತುಳುವೆರೆ ಕಲದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಶ್ವಿಜ ಶ್ರೀಧರ್, ಅರುಣಾ ಶ್ರೀನಿವಾಸ್, ಆಶಾ ಆಡೂರು, ವನಜಾ ಜೋಷಿ, ನಿಶಾ ಸಂತೋಷ್, ನಯನಾ ಟಿ., ಸಮ್ಯಕ್ಸ್ ಜೈನ್, ವಿದ್ಯಾಶ್ರೀ ಆಡೂರು, ಸುಶಾಂತ್, ನಾಗಶ್ರೀ ದಾತ, ಸೋನಾಕ್ಷಿ, ವೃಂದಾ ತಾಮಣ್ಯರ್ ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ. ಶಾಂತಾ ಜಿ.ಅಳದಂಗಡಿ ಅವರ ಸ್ವರಚಿತ ಕವನಗಳ ಸಂಕಲನ ಕಾವ್ಯಯಾನ, ವಿನುತಾ ರಜತ್ ಗೌಡ ಅವರ ಲೇಖನಗಳ ಗೊಂಚಲು ಪ್ರತಿಬಿಂಬ ಹಾಗೂ ವಿದ್ಯಾರ್ಥಿಗಳು ಮತ್ತು ಹೊಸ ಬರಹಗಾರರಿಂದ ರಚಿಸಲ್ಪಟ್ಟ ಕವನಗಳ ಸಂಕಲನ ಮೊದಲ ಹೆಜ್ಜೆ ಕೃತಿಗಳನ್ನು ಉಜಿರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಬಿಡುಗಡೆ ಮಾಡಲಿದ್ದಾರೆ.

ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನೆ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಗಂಟೆ 3.30ಕ್ಕೆ ಕಾರ್ಯಕ್ರಮದ ಸಮಾರೋಪವನ್ನು ಲೇಖಕ, ಅಂಕಣಕಾರ ಶಿವಪ್ರಸಾದ್ ಸುರ್ಯ ಮಾಡಲಿದ್ದಾರೆ ಎಂದರು.

ಉಪಾಧ್ಯಕ್ಷ ವಿಶ್ವೇಶ್ವರ ಭಟ್ ಉಂಡೆಮನೆ, ಕಾರ್ಯದರ್ಶಿ ಸುಭಾಷಿಣಿ, ಕೋಶಾಧಿಕಾರಿ ಕೇಶವ ಭಟ್ ಅತ್ತಾಜೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net