ಮಂಗಳೂರಲ್ಲಿ ಮೊದಲ ಮಳೆ ಅವಾಂತರ; ಉರುಳಿ ಬಿದ್ದ ಮರ

IMG-20220309-WA0003
Published on

ಮಂಗಳೂರು: ನಗರದಲ್ಲಿ ಬುಧವಾರ ಮುಂಜಾನೆ ಸುರಿದ ಮೊದಲ ಮಳೆ ಅವಾಂತರ ಸೃಷ್ಟಿಸಿದೆ. ನಗರದ ಸ್ಟೇಟ್ ಬ್ಯಾಂಕ್ ಬಳಿಯ ರೊಜಾರಿಯೋ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಲಾರಿ ಮೇಲೆ ಉರುಳಿ ಬಿದ್ದಿದ್ದು, ಚಾಲಕ ಪುರುಷೋತ್ತಮ ಅನ್ನುವವರು ಅದೃಷ್ಟಾವಶಾತ್ ಪಾರಾಗಿದ್ದಾರೆ. ಮರ ಬೀಳುತ್ತಿದ್ದಂತೆ ಲಾರಿಯಿಂದ ಹಾರಿದ ಚಾಲಕ ಪುರುಷೋತ್ತಮ ಅಪಾಯದಿಂದ ಪಾರಾಗಿದ್ದಾರೆ. ಶಾಲೆ, ಕಾಲೇಜು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ಉಳಿದಂತೆ ಯಾವುದೇ ಅಪಾಯ ಉಂಟಾಗಿಲ್ಲ. ಬಿಎಸ್ಎನ್ ಎಲ್ ಆವರಣದಿಂದ ಮರ ಬಿದ್ದಿದ್ದು, ಪಾಂಡೇಶ್ವರ ಅಗ್ನಿಶಾಮಕ ದಳದಿಂದ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬುಧವಾರ ಮುಂಜಾನೆ ವೇಳೆ ಜಿಲ್ಲಾದ್ಯಂತ ಗುಡುಗು ಮಳೆಯಾಗಿದ್ದು, ಕೆಲವೆಡೆ ಉತ್ತಮ, ಕೆಲವೆಡೆ ಸಾಮಾನ್ಯ ಮಳೆ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net