ಎಕ್ಸೆಲ್ ಕಾಲೇಜಿನಲ್ಲಿ ವಿಶೇಷ ರಿಯಾಯಿತಿ : ಪ್ರಥಮ ಪಿಯುಸಿ ದಾಖಲಾತಿ ಆರಂಭ : ಮುಂಚಿತ ದಾಖಲಾತಿಗೆ ಶುಲ್ಕ ಕಡಿತ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನಲ್ಲಿ 2025-26 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ಮುಂಚಿತವಾಗಿ ದಾಖಲಾತಿಗೊಳ್ಳುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.

ಸಂಸ್ಥೆಯಲ್ಲಿ ಸುಸಜ್ಜಿತ ತರಗತಿ ಕೊಠಡಿಗಳು, ಆಧುನಿಕ ತಂತ್ರಜ್ಞಾನವುಳ್ಳ ಸ್ಮಾರ್ಟ್ ಕ್ಲಾಸ್‌ಗಳು, ಅಂತರ್ಜಾಲ ವ್ಯವಸ್ಥೆ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನ ಮತ್ತು ಗಣಕ ವಿಜ್ಞಾನ ಪ್ರಯೋಗಾಲಯ ಹೊಂದಿದೆ. ವೈಜ್ಞಾನಿಕ, ವೈಚಾರಿಕ, ಸಾಹಿತ್ಯಿಕ ಗ್ರಂಥಗಳಿರುವ ಗ್ರಂಥಾಲಯ ಹಾಗೂ ಇ -ಲೈಬ್ರೆರಿ ಹೊಂದಿದೆ. ಪಠ್ಯಕ್ರಮದಲ್ಲಿ ಸುಮಾರು 10ರಿಂದ 30 ವರ್ಷ ಅನುಭವವುಳ್ಳ ಪ್ರಾಧ್ಯಾಪಕ ವಂದವಿದೆ.

ವಾಣಿಜ್ಯ ಕ್ಷೇತ್ರಕ್ಕೂ ಅವಕಾಶ

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆ ಜತೆಗೆ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗಕ್ಕೂ ವಿಸ್ತರಿಸಿಕೊಂಡಿದ್ದು, ಸಂಸ್ಥೆಯ ವಿಸ್ತೃತ ಯೋಜನೆಯೊಂದಿಗೆ ಮುಂದಿನ ದಿನಗಳಲ್ಲಿ ವಾಣಿಜ್ಯ ಕ್ಷೇತ್ರಕ್ಕೂ ಅವಕಾಶವನ್ನು ಒದಗಿಸಲಿದ್ದೇವೆ. ಈಗಾಗಲೇ ವಾಣಿಜ್ಯ ವಿಭಾಗದ ಪ್ರಥಮ ಪಿಯು ತರಗತಿಗಳು ನಡೆಯುತ್ತಿವೆ.

ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಸಾಧನೆ

ನಾಟಾ ಮತ್ತು ಫಾರೆನ್ಸಿಕ್ ಸೈನ್ಸ್ ಪರೀಕ್ಷೆಯಲ್ಲಿ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ. SMC RIE (Regional institute of Education) ಸಂಸ್ಥೆಗೆ ಪ್ರಥಮ ರಾಂಕ್‌ನೊಂದಿಗೆ ಸೇರ್ಪಡೆಗೊಂಡಿರುವ ಹಿರಿಮೆಯೊಂದಿಗೆ, NDA (National defence academy) ಪರೀಕ್ಷೆಯಲ್ಲೂ ಸಾಧನೆ ಮಾಡಿದ್ದಾರೆ. 2024-25ನೇ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ 956 ವಿದ್ಯಾರ್ಥಿಗಳ ಪೈಕಿ ಶೇ.94 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು, ರಾಜ್ಯಮಟ್ಟದ ಮೊದಲ ಹತ್ತು ರ‌್ಯಾಂಕ್‌ಗಳನ್ನು ಪಡೆದ ಹಿರಿಮೆ ಸಂಸ್ಥೆಯದ್ದಾಗಿದೆ.

357 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

2023- 24ನೇ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ 445 ವಿದ್ಯಾರ್ಥಿಗಳ ಪೈಕಿ 357 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 88 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ರಾಜ್ಯಮಟ್ಟದ ಮೊದಲ ಹತ್ತು ರಾಂಕ್‌ಗಳನ್ನು ಪಡೆದ ಹಿರಿಮೆ ಸಂಸ್ಥೆಯದ್ದು. ಇಬ್ಬರು ವಿದ್ಯಾರ್ಥಿಗಳು 597 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ದಾಖಲಾತಿಗಾಗಿ ಎಕ್ಸೆಲ್ ಸಂಸ್ಥೆಯ ವೆಬ್‌ಸೈಟ್ ಮೂಲಕ ಆನ್‌ಲೈನ್ ದಾಖಲಾತಿ ಸೌಲಭ್ಯ ಪಡೆದುಕೊಳ್ಳಬಹುದು. ಅಥವಾ ದೂರವಾಣಿ +91 9880899769 / 8867242769 ಮೂಲಕ ನೇರವಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು.

ಸಂಸ್ಥೆಯ ಹಿನ್ನೆಲೆ, ಉದ್ದೇಶ

ಎಕ್ಸೆಲ್ ವಿದ್ಯಾ ಸಂಸ್ಥೆಗಳ ರೂವಾರಿ ಸುಮಂತ್ ಕುಮಾರ್ ಜೈನ್ ದಶಕಗಳ ಕಾಲ ಉಪನ್ಯಾಸಕರಾಗಿ ಖಾಸಗಿ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸಿದ್ದು, ನೀಟ್, ಸಿಇಟಿ ಪರೀಕ್ಷೆಗಳ ತರಬೇತುದಾರರಾಗಿ ಅನುಭವ ಪಡೆದಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸರ್ಕಾರಿ ಸೀಟು ದೊರಕಿಸಿಕೊಡುವುದಕ್ಕಾಗಿ ನಾಲ್ಕು ಮಕ್ಕಳಿಂದ ಆರಂಭವಾದ ಕೋಚಿಂಗ್ ಸಂಸ್ಥೆ ಪ್ರಸ್ತುತ 400 ಮಕ್ಕಳಿಗೆ ತರಬೇತಿ ನೀಡುತ್ತಿದೆ. ಸಂಸ್ಥೆಯಲ್ಲಿ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಕಡಿಮೆ ಅವಧಿಯಲ್ಲಿ ರಾಷ್ಟ್ರಮಟ್ಟಲದಲ್ಲಿ ಗಮನಸೆಳೆದಿದೆ.

ಅತ್ಯುತ್ತಮ ದರ್ಜೆಯ ತರಬೇತಿ

ಸಂಸ್ಥೆಯು ನೀಟ್, ಜೆಇಇ, ಸಿಇಟಿ, ಎನ್‌ಡಿಎ, ಎನ್‌ಎಟಿಎ ಮುಂತಾದ ಪ್ರವೇಶ ಪರೀಕ್ಷೆಗಳಿಗೆ ಅತ್ಯುತ್ತಮ ದರ್ಜೆಯ ತರಬೇತಿ ನೀಡಲಾಗುತ್ತಿದೆ. ಅಪಾರ ಅನುಭವವುಳ್ಳ ಬೋಧಕ ವೃಂದವಿದ್ದು, ಬಿ.ಎಸ್ಸಿ ಅಗ್ರಿಕಲ್ಚರ್, ಫಾರೆನ್ಸಿಕ್ ಸೈನ್, ಎನ್‌ಡಿಎ, ವಾಣಿಜ್ಯ ವಿಭಾಗದಲ್ಲಿ ಸಿಎ, ಸಿಎಸ್, ಸಿಎಲ್‌ಎಟಿ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದೆ. ಈ ಮೂಲಕ ದೇಶದ ಶ್ರೇಷ್ಠ ಸಂಸ್ಥೆ ಎಐಎಂಎಸ್ ಸೇರ್ಪಡೆಯಾಗುವ ಕನಸು ನನಸಾಗಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಸಂಸ್ತೆಯು ರಾಜ್ಯದಲ್ಲೇ ಅದ್ವಿತೀಯ ಸಾಧನೆಗೈದಿದ್ದು, ಸಂಸ್ಥೆಯ ವಿದ್ಯಾರ್ಥಿ ಪ್ರಜ್ವಲ್ ಎಚ್.ಎಂ (710), ಆದಿತ್ ಜೈನ್ (692), ರಾಹುಲ್(689), ಸಂಜನಾ (649) ಅಂಕ ಪಡೆದಿದ್ದಾರೆ.

ಗುಣಮಟ್ಟದ ಸೌಲಭ್ಯ

ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗಳಿಗೆ ಪ್ರತ್ಯೇಕ ಹಾಸ್ಟೆಲ್‌ಗಳಿದ್ದು, ತಲಾ ಮೂವತ್ತು ವಿದ್ಯಾರ್ಥಿಗಳಿಗೆ ಒಬ್ಬರಂತೆ ನಿಲಯ ಪಾಲಕರು, ಮೇಲ್ವಿಚಾರಕರ ನೇಮಿಸಲಾಗಿದೆ. ಕುಡಿಯಲು ಶುದ್ಧ ನೀರು, 24 ಗಂಟೆಯು ವಿದ್ಯುತ್ ಸವಲತ್ತು, ಬಿಸಿನೀರಿನ ವ್ಯವಸ್ಥೆಗಳಿದೆ. ಕ್ಯಾಂಪಸ್‌ನೊಳಗೆ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ವ್ಯವಸ್ಥೆಯೂ ಇದ್ದು, ಶುಚಿ ರುಚಿ ಭೋಜನ ಸಹಿತ ಆಧುನಿಕ ಭದ್ರತಾ ವ್ಯವಸ್ಥೆಗಳೂ ಇವೆ.

  • ರಾಜ್ಯದಲ್ಲೇ ಪ್ರಸಿದ್ಧ ಶಿಕ್ಷಣ ಸಂಸ್ಥೆ
  • ಸಂಸ್ಥೆಯಲ್ಲಿ ಪ್ರತಿಭಾವಂತರಿಗೆ ಸೂಕ್ತ ಶೈಕ್ಷಣಿಕ ವೇದಿಕೆ
  • ಅತ್ಯುತ್ತಮ ಬೋಧನಾ ವೃಂದ
  • ನೀಟ್, ಸಿಇಟಿ, ಎನ್‌ಡಿಎ ಸಹಿತ ಸ್ಪರ್ಧಾತ್ಮಕ ಪರೀಕ್ಷೆಗೆ ಗುಣಮಟ್ಟದ ಕೋಚಿಂಗ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net