ಮಹೇಶ ಕಾಲೇಜಿನಲ್ಲಿ ಪಿಯು ಸಾಧಕರಿಗೆ ಸನ್ಮಾನ

IMG_20250406_181706_409.jpg
Published on

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯಲ್ಲಿರುವ ಡಾ. ಆರ್.ಬಿ. ಪಾಟೀಲ್ ಮಹೇಶ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಎನ್ಎಲ್ಇ ಸಂಸ್ಥೆಯ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

ವಿಜ್ಞಾನ ವಿಭಾಗದಲ್ಲಿ ಸುಮಯ್ಯಾ ಗಂಗೂರ 583 ಅಂಕದೊಂದಿಗೆ ಪ್ರಥಮ, ಶ್ರೇಯಾ ಡಂಬಳ 554 ಅಂಕ ದ್ವೀತಿಯ, ರಾಜೇಶ ಕಳಕನ್ನವರ 549 ಅಂಕದೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ವೈಷ್ಣವಿ ದೇವಮನಿ 583 ಅಂಕದೊಂದಿಗೆ ಪ್ರಥಮ, ಕೀರ್ತಿ ಕುಬಿಹಾಳ 572 ಅಂಕ ದ್ವೀತಿಯ ಹಾಗೂ ಫಾತೀಮಾ ಹುಸೇನ್ 565 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಎನ್ಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಗುರುರಾಜ ಕೌಜಲಗಿ, ಧನಶ್ರೀ ಕೌಜಲಗಿ, ಕಾಲೇಜಿನ ಪ್ರಾಚಾರ್ಯ ರವಿರಾಜ ಶಿದ್ಲಿಂಗ್, ಉಪನ್ಯಾಸಕರಾದ ಮುತ್ತಪ್ಪ ಚಿಕ್ಕರಾಯರ, ಶ್ರೀಕಾಂತ ಡಿ, ಸೌಮ್ಯ ಶಾಂತಗಿರಿ, ನಿಶಾ ವರ್ಮಾ, ಶ್ವೇತಾ ದೇಶಪಾಂಡೆ, ಮಾರ್ಕೆಟಿಂಗ್ ವಿಭಾಗದ ರಾಜಣ್ಣಾ ಗುಡಿಮನಿ, ಶೋಭಾ ಕೆ. ಮತ್ತು ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net