

ಕಲಾದಗಿ: ಸಮೀಪದ ಚಿಕ್ಕಸಂಶಿಯಲ್ಲಿ ಶ್ರೀ ಗಜಾನನ ಉತ್ಸವದ ನಿಮಿತ್ತ ಶ್ರೀ ಮಾರುತೇಶ್ವರ ಯುವಕ ಮಂಡಳಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ತೆರಬಂಡಿ ಸ್ಪರ್ಧೆಯಲ್ಲಿ ಅಕ್ಕಿಮರಡಿ ರೇವಣಸಿದ್ಧೇಶ್ವರ ಬಂಡಿ ಪ್ರಥಮ ಸ್ಥಾನ ಪಡೆದು ಮೊದಲ ಬಹುಮಾನದ ಹೀರೋ ಬೈಕ್ ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿದೆ.
ಮಮದಾಪುರದ ದುರ್ಗಾದೇವಿ ಪ್ರಸನ್ನ ದ್ವಿತೀಯ, ಒಂಟಗೋಡಿಯ ಅಕ್ಷಯ ಐನಾಪುರ ತೃತೀಯ, ಬುದ್ನಿ ಪಿಎಂನ ರಾಮಚರಣ ಪೂಜಾರಿ ಚತುರ್ಥ, ಮೇಟಗುಡ್ಡ ಕಾಶಿಲಿಂಗೇಶ್ವರ ಪ್ರಸನ್ನ ಐದು, ಮುಧೋಳದ ಜೈ ಹನುಮಾನ ಆರು, ಇಟ್ನಾಳದ ಶ್ರೀ ದುರ್ಗಾದೇವಿ ಏಳು, ಇಂಗಳಗಿಯ ಶ್ರೀ ಮಂಜುನಾಥ ಪ್ರಸನ್ನ ಎಂಟು, ಶಿರೋಳದ ಶ್ರೀ ಸದಾಶಿವ ಪ್ರಸನ್ನ ಒಂಭತ್ತು ಹಾಗೂ ಕಮಲದಿನ್ನಿಯ ಪಾಂಡು ಕುಲಗೋಡ ಹತ್ತನೇ ಸ್ಥಾನ ಪಡೆದುಕೊಳ್ಳುವ ಜತೆಗೆ 30 ಸಾವಿರದಿಂದ 3 ಸಾವಿರ ರೂವರೆಗಿನ ನಗದು ಬಹುಮಾನ ತಮ್ಮದಾಗಿಸಿಕೊಂಡರು.
ಬಾಗಲಕೋಟೆ ಜಿಲ್ಲೆ ಸೇರಿ ಅಕ್ಕಪಕ್ಕದ ಜಿಲ್ಲೆಯ 20ಕ್ಕೂ ಹೆಚ್ಚು ತೆರಬಂಡಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಚಿಕ್ಕಸಂಶಿಯ ಯುವಮುಖಂಡ ನಾರಾಯಣ ಹಾದಿಮನಿ, ಕೃಷ್ಣ ಕೃಷ್ಣಪ್ಪನ್ನವರ, ಕೃಷ್ಣಾ ಪತ್ತಾರ, ಗೋಪಾಲ ಶೇಗುಣಿಸಿ, ವಿಠಲ ನ್ಯಾಮಗೌಡ, ಗೋಪಾಲಗೌಡ ಪಾಟೀಲ, ರಮೇಶ ನ್ಯಾಮಗೌಡ, ವಿಠಲ ಸಾಲಾಪುರ, ರಮೇಶ ಕೃಷ್ಣಪ್ಪನವರ, ಅಜೀತಗೌಡ ಪಾಟೀಲ, ವಿಠಲ ರವಳಿ ಮತ್ತಿತರರು ಮುಂದಾಳತ್ವ ವಹಿಸಿದ್ದರು.