

ಬಾದಾಮಿ: ಮೂಲಭೂತ ಸೌಕರ್ಯಗಳಿಗೆ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ತಾಲೂಕಿನ ಕೆಂದೂರ ಗ್ರಾಮದಲ್ಲಿ ನಿರ್ಮಿಸಿದ್ದ ಗ್ರಾಪಂ ರಾಜೀವ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ನರೇಗಾದಡಿ 28 ಲಕ್ಷ ರೂ. ಹಾಗೂ 15ನೇ ಹಣಕಾಸು ಯೋಜನೆಯಡಿ 20 ಲಕ್ಷ ರೂ. ಸೇರಿದಂತೆ ಒಟ್ಟು 48 ಲಕ್ಷ ರೂ.ವೆಚ್ಚದಡಿಯಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಗ್ರಾಪಂನಿಂದ ವಸತಿ, ಕುಡಿಯುವ ನೀರು, ಶೌಚಾಲಯ, ನರೇಗಾ ಯೋಜನೆ ಕೂಲಿ ಕೆಲಸ, ಬಚ್ಚಲು ಗುಂಡಿ ನಿರ್ಮಾಣ, ಕೆರೆ ಅಭಿವೃದ್ಧಿ, ಜಾನುವಾರು ಶೆಡ್ ನಿರ್ಮಾಣ ಮತ್ತಿತರ ಯೋಜನೆಗಳಿದ್ದು ಸಾರ್ವಜನಿಕರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೆಂದೂರ ಗ್ರಾಮದ ಸ್ವರೂಪಾನಂದ ಶ್ರೀಗಳು, ಅಭಿನವ ಒಪ್ಪತ್ತೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ತಾಪಂ ಇಒ ಸುರೇಶ ಕೊಕರೆ, ಆಡಳಿತ ಅಧಿಕಾರಿ ಅಶೋಕ ತಿರಕನ್ನವರ, ಜಿಪಂ ಎಇಇ ಎ.ಎಸ್. ತೋಪಲಕಟ್ಟಿ, ಪಿಡಿಒ ಸುನೀತಾ ಅಂಗಡಿ ಮತ್ತಿತರರಿದ್ದರು.