ಮೊದಲ ಮತದಾನದ ಪುಳಕ

first voters
ಶಿಕಾರಿಪುರ ತಾಲೂಕು ಈಸೂರು ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದವರು.
Published on

ಶಿವಮೊಗ್ಗ: ಜಿಲ್ಲೆಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಮೊದಲ ಬಾರಿಗೆ ಹಕ್ಕು ಚಲಾಯಿಸಿ ಸಂಭ್ರಮಿಸಿದರು. ಮತದಾನದ ಮಹತ್ವವನ್ನು ಅರಿತಿದ್ದೇವೆ. ದೇಶಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಸಂಬಂಧ ನಮ್ಮ ಹಕ್ಕು ಚಲಾಯಿಸಿದ್ದು ಖುಷಿ ನೀಡಿದೆ ಎಂದು ಬಹುತೇಕರು ಮತಗಟ್ಟೆ ಹೊರಗೆ ಖುಷಿ ವ್ಯಕ್ತಪಡಿಸಿದರು.

ದೇಶ ಇನ್ನಷ್ಟು ಬಲಿಷ್ಠವಾಗಬೇಕು. ಇಲ್ಲಿನ ಸಮಸ್ಯೆಗಳು ಪರಿಹಾರವಾಗಬೇಕು. ಎಲ್ಲರಿಗೂ ಸವಲತ್ತು ದೊರೆಯುವಂತಾಗಬೇಕು. ನಾವು ಆಯ್ಕೆ ಮಾಡುವವರು ನಮ್ಮ ಆಶೋತ್ತರಗಳನ್ನು ಈಡೇರಿಸುವ ಭರವಸೆಯಿದೆ ಎಂದು ಮತದಾನದ ಬಳಿಕ ಹೊಸ ಮತದಾರರು ವಿಶ್ವಾಸ ವ್ಯಕ್ತಪಡಿಸಿದರು.
ಜಿಪಂ ಮಾದರಿ ಮತಗಟ್ಟೆಯಲ್ಲಿ ಸಂಜನಾ, ಶಿಕಾರಿಪುರ ತಾಲೂಕು ಈಸೂರು ಮತಗಟ್ಟೆ 213ರಲ್ಲಿ ಸುಪ್ರೀತ್, ಪ್ರಜ್ವಲ್, ಪವನ್, ಸೃಜನಾ, ಸಿಂಚನಾ, ಕವನ, ಪ್ರಿಯದರ್ಶಿನಿ, ತ್ರಿವೇಣಿ ಮುಂತಾದವರು ಮತ ಚಲಾಯಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net