ಹುಚ್ಚವನಹಳ್ಳಿ ಬಾಲಕಿಯರ ಸಾಧನೆ

mkg1d
Published on

ಜಗಳೂರು: ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಥ್ರೋಬಾಲ್ ಪಂದ್ಯದಲ್ಲಿ ತಾಲೂಕಿನ ಹುಚ್ಚವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರು ಪ್ರಥಮ ಸ್ಥಾನ ಪಡೆದಿದ್ದಾರೆ.

ಚನ್ನಗಿರಿ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಥ್ರೋಬಾಲ್ ಕೊನೆಯ ಪಂದ್ಯದಲ್ಲಿ ಹರಿಹರ ಮತ್ತು ಜಗಳೂರು ಮುಖಾಮುಖಿಯಾಗಿದ್ದು, ರಣರೋಚಕ ಪಂದ್ಯದಲ್ಲಿ ಹುಚ್ಚವ್ವನಹಳ್ಳಿ ಶಾಲಾ ಮಕ್ಕಳು ಗೆಲುವು ಸಾಧಿಸಿದ್ದಾರೆ.

ಶಾಲೆಯಲ್ಲಿ 62 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಮೂರು ಮಂದಿ ಶಿಕ್ಷಕರಿದ್ದು, ದೈಹಿಕ ಶಿಕ್ಷಕರ ಕೊರತೆಯ ನಡುವೆಯೂ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕ್ರೀಡಾಪಟುಗಳಾದ ಪೂರ್ವಿಕಾ, ಪೂಜಾ, ಹೇಮಲತಾ, ವಂಶಿಕಾ, ಲಕ್ಷ್ಮೀ, ಶಮಿತಾ, ಚಂದನಾ, ಹರ್ಷಿತಾ, ಫಾತಿಮಾ, ಶೋಭಾ, ಲಿಖಿತಾ, ಪ್ರಿಯಾ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net