

ಬೆಳ್ತಂಗಡಿ: ಅಮರ್ ಶಾ ಕರಾಟೆ ಆ್ಯಂಡ್ ಫಿಟ್ನೆಸ್ ಅಕಾಡೆಮಿ ವತಿಯಿಂದ ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ , ಕರ್ನಾಟಕ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್, ಇಂಡಿಯಾ ಕರಾಟೆ ಅಸೋಸಿಯೇಷನ್ ಮತ್ತು ವಿಶ್ವ ಕರಾಟೆ ಫೆಡರೇಷನ್ ಸಹಯೋಗದೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಷಿಪ್ ಸ್ಪರ್ಧೆಯಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ರಯ್ಯನ್ ಪ್ರಥಮ ಸ್ಥಾನದೊಂದಿಗೆ ಕಟಾ ಹಾಗು ಕುಮಿಟೆಯಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ. ಅವರು ಮಹಮ್ಮದ್ ರಯ್ಯನ್ ಉಜಿರೆ ಗಾಂಧಿನಗರ ನಿವಾಸಿ ಬಿ.ಎಚ್.ಇಬ್ರಾಹಿಂ ಹಾಗೂ ನೂರ್ ಜಹಾನ್ ದಂಪತಿ ಪುತ್ರ.