

ಮೈಸೂರು: ರೋಟರಿ ಜಿಲ್ಲೆ 3181ರ ಜಿಲ್ಲಾ ಮಟ್ಟದ ಅಂತರ ರೋಟರಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜಯನಗರದ ರೋಟರಿ ಕ್ಲಬ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಎಚ್.ಎಂ.ಹರೀಶ್ ಪ್ರಥಮ ಸ್ಥಾನ ಪಡೆವ ಮೂಲಕ ರೋಟರಿ ಜಿಲ್ಲಾ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಪಡೆದರು.
ರೋಟರಿ ಮಂಗಳೂರು ಸಂಸ್ಥೆ ಆಶ್ರಯದಲ್ಲಿ ಪ್ರತಿ ವರ್ಷ ರೋಟರಿ ಜ್ಞಾನ ರಸಪ್ರಶ್ನೆ ಮಾಹಿತಿ ಮತ್ತು ಜಾಗೃತಿ ಅಭಿಯಾನ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ನಡೆಯುತ್ತದೆ. ಈ ಬಾರಿ ಮಂಗಳೂರು ನಗರದಲ್ಲಿ ಇತ್ತೀಚೆಗೆ 19ನೇ ವಾರ್ಷಿಕ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.
ಎಚ್.ಎಂ.ಹರೀಶ್ ಅವರು ಮೊಬೈಲ್ ಆ್ಯಪ್ ಬಳಸಿ ನಡೆಸುವ ರೋಟರಿ ರಸಪ್ರಶ್ನ ಸ್ಪರ್ಧೆಯಲ್ಲಿ 120 ವರ್ಷಗಳ ಇತಿಹಾಸವಿರುವ ರೋಟರಿ, ಪ್ರಸ್ತುತ ರೋಟರಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ರೋಟರಿ ಸಂಸ್ಥೆಯ ಆಡಳಿತ ವಿಷಯ ಹಾಗೂ ಚಟುವಟಿಕೆಗಳ ಬಗ್ಗೆ 50 ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೆ ಉತ್ತರಿಸಲು 30 ಸೆಕೆಂಡು ಕಾಲಾವಕಾಶ ನೀಡಲಾಗುತ್ತಿದೆ. ಈ ಸಮಯದಲ್ಲೇ 50 ಪ್ರಶ್ನೆಗಳಿಗೂ ಸರಿ ಉತ್ತರ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದರು.
ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ 19 ವರ್ಷಗಳ ರೋಟರಿ ಜ್ಞಾನ ಸ್ಪರ್ಧೆ ಇತಿಹಾಸದಲ್ಲಿಯೇ ಇದು ಪ್ರಥಮವಾಗಿರುವುದು ವಿಶೇಷ ಸಂಗತಿಯಾಗಿದೆ. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸಂಸ್ಥೆ ಪ್ರತಿನಿಧಿಸಿದ್ದ ಡಾ.ಸೂರ್ಯನಾರಾಯಣ್ ಹಾಗೂ ಪ್ರಮೀಳಾ ರಾವ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮೈಸೂರು, ಮಂಗಳೂರು, ಸೂರತ್ಕಲ್, ಪುತ್ತೂರು, ದೇರಳಕಟ್ಟೆ ಸೇರಿ ಜಿಲ್ಲೆಯ ಒಟ್ಟು 13 ತಂಡಗಳಲ್ಲಿ ತಲಾ ತಂಡಕ್ಕೆ ಇಬ್ಬರಂತೆ ಒಟ್ಟು 26 ಸ್ಪರ್ಧಿಗಳು ಅಂತಿಮ ಹಾಗೂ ನಿರ್ಣಾಯಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ರೋಟರಿಯ ಆಕರ್ಷಕ ಪ್ರಶಸ್ತಿ ಟ್ರೋಫಿ ಪ್ರಮಾಣ ಪತ್ರ ಹಾಗೂ 3 ಸಾವಿರ ನಗದು ನೀಡಿ ಅಭಿನಂದಿಸಲಾಯಿತು.
ಜಿಲ್ಲಾ ಮಾಜಿ ಗವರ್ನರ್ಗಳಾದ ಡಾ.ಬಿ. ದೇವದಾಸ್ ರೈ, ಗುರುರಾಜ್, ರೋಟರಿ ಅಧ್ಯಕ್ಷ ಬ್ರಾಯಾನ್ ಪಿಂಟೋ, ಕಾರ್ಯದರ್ಶಿ ರಾಜೇಶ್ ಸೀತಾರಾಮ, ಸಹಾಯಕ ಪ್ರಾಂತಪಾಲ ಕೃಷ್ಣ ಎಂ.ಹೆಗ್ಡೆ, ನಿಯೋಜಿತ ಅಧ್ಯಕ್ಷ ರವಿ ಜಲನ್, ಕ್ಲಬ್ನ ಹಿರಿಯರಾದ ಭಾಸ್ಕರ್ ರೈ ಕಟ್ಟಾ, ಮಲ್ಯ ಇತರರು ಇದ್ದರು.