

ಬೆಳ್ತಂಗಡಿ: ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಮಂಗಳೂರು, ವಿವಿಧ ವಿಷಯವಾರು ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜು ಮೂಡುಬಿದಿರೆ ಸಂಯುಕ್ತ ಆಶ್ರಯದಲ್ಲಿ ಮುಂಡ್ರುದೇಗುತ್ತು ಕೆ.ಅಮರನಾಥ ಶೆಟ್ಟಿ ಸಭಾಂಗಣ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯರ ತಂಡ ಸತತ ಎರಡನೇ ಬಾರಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ತಂಡದಲ್ಲಿ ಆಂಗ್ಲ ಭಾಷಾ ವಿಭಾಗದ ವೈದೇಹಿ, ಸುಪ್ರೀತಾ, ನಿಹಾರಿಕ, ಸ್ಮಿತಾ, ಅರ್ಥಶಾಸ್ತ್ರ ವಿಭಾಗದ ಪದ್ಮಶ್ರೀ, ಜೀವಶಾಸ್ತ್ರ ವಿಭಾಗದ ಕವನಶ್ರೀ, ಸಂಖ್ಯಾಶಾಸ್ತ್ರ ವಿಭಾಗದ ಅಂಕಿತಾ, ಮನಃಶಾಸ್ತ್ರ ವಿಭಾಗದ ಶ್ಯಾಮಿಲ ಹಾಗೂ ಭೌತಶಾಸ್ತ್ರ ವಿಭಾಗದ ಅಮೃತ ಭಾಗವಹಿಸಿದ್ದರು.
ಉಪನ್ಯಾಸಕಿಯರ ಸಾಧನೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್., ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಹಾಗೂ ಸೋನಿಯಾ ವರ್ಮಾ ಅಭಿನಂದಿಸಿದ್ದಾರೆ.