

ಕಾಸರಗೋಡು: ಸಾರ್ವತ್ರಿಕ ಚುನಾವಣೆಗೆ ಇಲೆಕ್ಟ್ರಾನಿಕ್ ಮತಯಂತ್ರಗಳ ಮೊದಲ ಹಂತದ ತಪಾಸಣಾ ಕಾರ್ಯ ಜಿಲ್ಲಾಧಿಕಾರಿ ಕಚೇರಿ ವಠಾರದ ಜಿಲ್ಲಾ ದಾಸ್ತಾನು ಕೊಠಡಿಯಲ್ಲಿ ಸಿದ್ಧಪಡಿಸಲಾದ ವಿಶೇಷ ಸಭಾಂಗಣದಲ್ಲಿ ಆರಂಭಗೊಂಡಿತು.
ಜಿಲ್ಲಾ ಚುನಾವಣಾ ಅಧಿಕಾರಿ ಕೆ.ಇನ್ಬಾಶೇಖರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಕೊಠಡಿ ಬಾಗಿಲು ತೆರೆದು ಮೊದಲ ಹಂತದ ಪರಿಶೀಲನೆಗಾಗಿ ಮತ ಯಂತ್ರಗಳನ್ನು ಹಸ್ತಾಂತರಿಸಿದರು. ಒಟ್ಟು 20 ತಂಡಗಳ ಬ್ಯಾಚ್ ತಪಾಸಣೆ ನಡೆಸುತ್ತಿವೆ. 20 ನಿಯಂತ್ರಣ ಘಟಕಗಳು ಮತ್ತು 60 ಬ್ಯಾಲೆಟ್ ಟಕಗಳನ್ನು ಪರಿಶೀಲಿಸಿ ಸಂಗ್ರಹಿಸಲಾಗುತ್ತದೆ.
ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಪಿ.ಅಖಿಲ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ.ಕುಂಞಂಬು ನಂಬಿಯಾರ್, ಟಿ.ಎಂ.ಎ.ಕರೀಂ, ಎಂ.ಶ್ರೀಧರ, ಉಮ್ಮರ್ ಪಾಟಲಡ್ಕ ಮೊದಲಾದವರು ಭಾಗವಹಿಸಿದ್ದರು. ಆಗಸ್ಟ್‌ನಲ್ಲಿ ಮತ ಯಂತ್ರಗಳ ಮೊದಲ ಹಂತದ ಪರಿಶೀಲನೆ ನಡೆಯಲಿದೆ. ಒಟ್ಟು 5,970 ಬ್ಯಾಲೆಟ್ ಯೂನಿಟ್‌ಗಳು ಮತ್ತು 2,110 ಕಂಟ್ರೋಲ್ ಯೂನಿಟ್‌ಗಳನ್ನು ಪರಿಶೀಲಿಸಲಾಗುವುದು. ದಿನಕ್ಕೆ ಏಳು ಸುತ್ತುಗಳಲ್ಲಿ 140 ಕಂಟ್ರೋಲ್ ಯೂನಿಟ್‌ಗಳು ಮತ್ತು 420 ಬ್ಯಾಲೆಟ್ ಯೂನಿಟ್‌ಗಳನ್ನು ಪರಿಶೀಲಿಸಲಾಗುವುದು. ಪರಿಶೀಲನೆ ಆಗಸ್ಟ್ 20ರವರೆಗೆ ಮುಂದುವರಿಯಲಿದೆ.