ಭಾರತೀಯ ಕಿಸಾನ್ ಸಂಘದ ಪ್ರಥಮ ಮಾಸಿಕ ಸಭೆ

ತಿ.ನರಸೀಪುರ ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತೀಯ ಕಿಸಾನ್ ಸಂಘದ ಪ್ರಥಮ ಮಾಸಿಕ ಸಭೆಯಲ್ಲಿ  ನಾಗಲಗೆರೆ ಶಿವಕುಮಾರ್, ಬೆನಕನಹಳ್ಳಿ ರಾಜಶೇಖರ್, ದೊಡ್ಡನಹುಂಡಿ ಪ್ರಭಾಕರ್ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತೀಯ ಕಿಸಾನ್ ಸಂಘದ ಪ್ರಥಮ ಮಾಸಿಕ ಸಭೆಯಲ್ಲಿ ನಾಗಲಗೆರೆ ಶಿವಕುಮಾರ್, ಬೆನಕನಹಳ್ಳಿ ರಾಜಶೇಖರ್, ದೊಡ್ಡನಹುಂಡಿ ಪ್ರಭಾಕರ್ ಇತರರು ಇದ್ದರು.
Published on

ತಿ.ನರಸೀಪುರ: ತಾಲೂಕು ಭಾರತೀಯ ಕಿಸಾನ್ ಸಂಘದ ಪ್ರಥಮ ಮಾಸಿಕ ಸಭೆಯನ್ನು ಮಂಗಳವಾರ ಆಯೋಜಿಸಲಾಗಿತ್ತು.

ಭತ್ತದ ಕಟಾವು ಯಂತ್ರದ ಮಾಲೀಕರು ವಿಧಿಸುವ ಹೆಚ್ಚುವರಿ ದರ, ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಮಾಡಲು ವಿಳಂಬ ಮಾಡುತ್ತಿರುವುದು ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಸಂಘದ ಅಧ್ಯಕ್ಷ ನಾಗಲಗೆರೆ ಶಿವಕುಮಾರ್, ಗೌರವಾಧ್ಯಕ್ಷ ಬೆನಕನಹಳ್ಳಿ ರಾಜಶೇಖರ್, ಕಾರ್ಯದರ್ಶಿ ದೊಡ್ಡನಹುಂಡಿ ಪ್ರಭಾಕರ್, ಪದಾಧಿಕಾರಿಗಳಾದ ಬೆನಕನಹಳ್ಳಿ ಪರಮೇಶ್, ತಡಿಮಾಲಂಗಿ ಪ್ರಭುಸ್ವಾಮಿ, ಕೊಳತ್ತೂರು ಮರಿಸ್ವಾಮಿ, ದೊಡ್ಡನಹುಂಡಿ ಮೋಹನ್ ಕುಮಾರ್, ಕೃಷ್ಣಮೂರ್ತಿ, ಎಂ. ಪ್ರಭು, ಶಿವಮಲ್ಲು, ಶಿವಣ್ಣ ಇತರರಿದ್ದರು.

ಸಭೆ ನಂತರ ಸಹಾಯಕ ಕೃಷಿ ನಿರ್ದೇಶಕಿ ಸುಹಾಸಿನಿ ಅವರು 2025ರ ದಿನದರ್ಶಿಕೆ ಬಿಡುಗಡೆ ಮಾಡಿದರು.

ನಂತರ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸೆಸ್ಕ್, ನೀರಾವರಿ ಹಾಗೂ ಎಪಿಎಂಸಿಗೆ ಭೇಟಿ ನೀಡಿ ಇಲಾಖೆಗಳು ನಡೆಸುವ ಕಾರ್ಯಕ್ರಮಗಳಿಗೆ ಭಾರತೀಯ ಕಿಸಾನ್‌ಸಂಘವನ್ನು ಆಹ್ವಾನಿಸಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net