

ಧಾರವಾಡ: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಹಿಂದುಸ್ತಾನಿ ತಾಳವಾದ್ಯ ತಬಲಾ ಸೀನಿಯರ್ ಪರೀಕ್ಷೆ -2024ರಲ್ಲಿ ಧಾರವಾಡದ ಅಥರ್ವ ರಾವೇಂದ್ರ ಘಂಟೆಣ್ಣವರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಥರ್ವ ಅವರು 10 ವರ್ಷಗಳಿಂದ ಡಾ. ಶ್ರೀಹರಿ ದಿಗ್ಗಾವಿ ಅವರ ಬಳಿ ತಬಲಾ ಅಭ್ಯಾಸ ನಡೆಸುತ್ತಿದ್ದಾರೆ.