ಪ್ರಥಮ ದರ್ಜೆ ಸಹಾಯಕ ಅಮಾನತು

crime
Published on

ಹುಬ್ಬಳ್ಳಿ: ಇಲ್ಲಿಯ ನೃಪತುಂಗ ಬೆಟ್ಟದ ಪಾರ್ಕ್ ಪ್ರವೇಶ ಶುಲ್ಕದಿಂದ ಸಂಗ್ರಹವಾದ 6,62,410 ರೂ. ಸರ್ಕಾರಿ ಖಾತೆಗೆ ಜಮಾ ಮಾಡದೇ ದುರ್ಬಳಕೆ ಮಾಡಿಕೊಂಡ ಆರೋಪದಡಿ ಹುಬ್ಬಳ್ಳಿ ಪ್ರಾದೇಶಿಕ ಅರಣ್ಯ ವಲಯದ ಪ್ರಥಮ ದರ್ಜೆ ಸಹಾಯಕ ವಿಶ್ವನಾಥ ಮಹಾಜನ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯತೀಶ ಕುಮಾರ ಅವರು ಕರ್ನಾಟಕ ನಾಗರಿಕ ಸೇವಾ ನಿಯಮಗಳ ಉಲ್ಲಂಘನೆಯಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ ನೀಡಿದ ವರದಿ ಆಧರಿಸಿ ಏ. 21ರಂದು ಅಮಾನತುಗೊಳಿಸಿದ್ದಾರೆ.

20024ರ ಮೇ 20ರಿಂದ ಕಳೆದ ಜನವರಿ 1ರವರೆಗೆ ಸಂಗ್ರಹವಾದ ಪಾರ್ಕ್ ಪ್ರವೇಶ ಶುಲ್ಕವನ್ನು ಮಹಾಜನ ಸರ್ಕಾರಿ ಖಾತೆಗೆ ಜಮಾ ಮಾಡಿರಲಿಲ್ಲ. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net