ಮೊದಲ ದಿನ ಪ್ರತ್ಯಕ್ಷದರ್ಶಿಗಳ ಹೇಳಿಕೆ ಸಂಗ್ರಹ

court
Published on

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ವಿಚಾರಣೆ ಇಲ್ಲಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯಲಾಗಿದೆ.

2024ರ ಏಪ್ರಿಲ್ 18ರಂದು ವಿದ್ಯಾರ್ಥಿನಿ ನೇಹಾ ಹಿರೇಮಠ ಅನ್ನು ಕಾಲೇಜ್ ಆವರಣದಲ್ಲಿ ಕೊಲೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ವಿಚಾರಣೆ ಆರಂಭವಾಗಿದ್ದು, ನ್ಯಾಯಾಧೀಶರು ಮೊದಲ ದಿನ ಕೊಲೆ ನಡೆದ ಸ್ಥಳವಾದ ಕಾಲೇಜ್ ಆವರಣದಲ್ಲಿದ್ದ ಇಬ್ಬರು ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದರು.

ಕೊಲೆ ಘಟನೆಯಲ್ಲಿ ಒಟ್ಟು 99 ಸಾಕ್ಷಿಗಳಿದ್ದು, ಸೋಮವಾರ ನಾಲ್ಕು, ಮಂಗಳವಾರ ನಾಲ್ಕು ಜನ ಪ್ರತ್ಯಕ್ಷದರ್ಶಿಗಳು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಆರೋಪಿ ಫಯಾಜ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ. ನೇಹಾ ಕುಟುಂಬದ ಪರ ಸರ್ಕಾರದ ವಿಶೇಷ ಅಭಿಯೋಜಕ ಮಹೇಶ ವೈದ್ಯ, ಕುಟುಂಬದ ವಕೀಲರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net