ಪ್ರಥಮ ಸಮ್ಮೇಳನಕ್ಕೂ ತಟ್ಟಿದ ಕರೊನಾ ಬಿಸಿ

14MDL3-Web
ಕಸಾಪ ತಾಲೂಕಾಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಜಿತ ಮನ್ನಿಕೇರಿ, ಬಾಲಶೇಖರ ಬಂದಿ, ಬಸವರಾಜ ಕೋಟಿ, ಶಂಕರ ನಿಂಗನೂರ, ಮುರಗೇಶ ಗಾಡವಿ, ಚಿದಾನಂದ ಹೂಗಾರ ಇತರರು ಇದ್ದರು.
Published on

ಮೂಡಲಗಿ: ಸರ್ಕಾರದ ತುರ್ತು ಆದೇಶ ಮತ್ತು ತಾಲೂಕಾಡಳಿತದ ನಿರ್ದೇಶನದ ಮೇರೆಗೆ ಶನಿವಾರ ನಡೆಯಬೇಕಿದ್ದ ಮೂಡಲಗಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಹೇಳಿದ್ದಾರೆ.

ಶನಿವಾರ ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಮ್ಮೇಳನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸರ್ಕಾರದ ಆದೇಶ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಮುಂದಿನ ಆದೇಶ ಬರುವವರೆಗೆ ಮತ್ತು ಕಸಾಪ ಜಿಲ್ಲಾಧ್ಯಕ್ಷರ ನಿರ್ದೇಶನ ಪಡೆದು ಸಮ್ಮೇಳನದ ದಿನಾಂಕ ಪ್ರಕಟಿಸಲಾಗುವುದು ಎಂದರು.

ಬಿಇಒ ಅಜಿತ ಮನ್ನಿಕೇರಿ, ಬಾಲಶೇಖರ ಬಂದಿ, ಬಸವರಾಜ ಕೋಟಿ, ಶಂಕರ ನಿಂಗನೂರ, ಮುರಗೇಶ ಗಾಡವಿ, ಚಿದಾನಂದ ಹೂಗಾರ, ಮಹಾದೇವ ಮಲಗೌಡರ, ಸಂಧ್ಯಾ ಪಾಟೀಲ, ಉಮೇಶ ಬೆಳಕೂಡ, ಸಾವಿತ್ರಿ ಕಮಲಾಪುರ, ಬಿ.ವೈ.ಶಿವಾಪುರ, ಯಡ್ವಿನ್ ಪರಸಣ್ಣವರ, ಗಂಗಾಧರ ಬಿಜಗುಪ್ಪಿ, ಸಿ.ಎಸ್.ಬಗನಾಳ, ರಮೇಶ ಒಂಟಗೋಡಿ, ಡಾ.ಸಂಜಯ ಶಿರಹಟ್ಟಿ, ಬಸವರಾಜ ತರಕಾರ, ಶಂಕರ ತುಕ್ಕಣ್ಣವರ, ಸುಭಾಷ ಕಡಾಡಿ, ಶಿವರಡ್ಡಿ ಹುಚ್ಚರಡ್ಡಿ, ಬಸವರಾಜ ಹುಲಕುಂದ, ಅಶೋಕ ನಾಯಿಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net