ಮೊದಲ ಗ್ರಾಹಕ ಶಂಕರ್ ಭಟ್ ಅವರ ಕಾರಿಗೆ ಸಿಎನ್‌ಜಿ ತುಂಬಿಸಲಾಯಿತು. ಪ್ರಸ್ತುತ ಒಂದು ಕೆ.ಜಿ. ಸಿಎನ್‌ಜಿ ದರ 55 ರೂ. ಇದೆ. ಜಿಲ್ಲೆ 80-100 ಸ್ಟೇಷನ್ ಆರಂಭಿಸಲು ಉದ್ದೇಶಿಸಲಾಗಿದ್ದು, ಮಾರ್ಚ್ ಅಂತ್ಯದ ವೇಳೆಗೆ 10 ಸ್ಟೇಷನ್‌ಗಳು ಮಂಗಳೂರು ಮತ್ತು ಜಿಲ್ಲೆಯ ವಿವಿಧೆಡೆ ಆರಂಭವಾಗಲಿದೆ ಎಂದು ಕಪಿಲ್ ಕುಮಾರ್ ಜೈನ್ ಮಾಹಿತಿ ನೀಡಿದರು.
ಗೈಲ್ ಸಿಜಿಎಂ ಪ್ರಾಜೆಕ್ಟ್ಸ್ ಕಪಿಲ್ ಕುಮಾರ್ ಜೈನ್, ಡಿಜಿಎಂ ವಿಲೀನ್ ಝುಂಕೆ, ಐಒಸಿ ಮಂಗಳೂರು ವಿಭಾಗದ ಸಿಡಿಆರ್‌ಎಸ್‌ಎಂ ಅನೂಪ್ ಕುಶ್ವಾ, ಸೀನಿಯರ್ ಮ್ಯಾನೇಜರ್ ರೀಟೈಲ್ ಸೇಲ್ಸ್ ಸಿ.ಎನ್.ಶ್ರೀನಿವಾಸ್, ಅಸಿಸ್ಟೆಂಟ್ ಮ್ಯಾನೇಜರ್ ರೀಟೈಲ್ ಸೇಲ್ಸ್ ಪ್ರತಿಭಾ, ಬಂಕ್ ಮಾಲೀಕ ಬಾಬು ಮೊದಲಾದವರು ಉಪಸ್ಥಿತರಿದ್ದರು.
ಅಡ್ಯಾರ್‌ಕಟ್ಟೆ ಬಳಿಯ ನೇತ್ರಾವತಿ ಸರ್ವಿಸ್ ಸ್ಟೇಷನ್‌ನಲ್ಲಿ ಬಂಕ್ ಆರಂಭವಾಗಿದ್ದು, ಇಂಡಿಯನ್ ಆಯಿಲ್ ಮತ್ತು ಗೈಲ್ ಅಧಿಕಾರಿಗಳು ಕಾರಿಗೆ ಸಿಎನ್‌ಜಿ ತುಂಬಿಸುವ ಮೂಲಕ ಉದ್ಘಾಟಿಸಿದರು.
ಮಂಗಳೂರು: ಕರಾವಳಿಯ ಮೊದಲ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ವಿತರಣೆ ಬಂಕ್ ಮಂಗಳವಾರ ಕಾರ್ಯಾರಂಭಿಸಿದೆ.