

ವಿಜಯವಾಣಿ ಸುದ್ದಿಜಾಲ ಉಡುಪಿ
ಮಕ್ಕಳ ದೈಹಿಕ ಹಾಗೂ ಮಾನಸಿಕ ಸಾಸ್ಥ್ಯ ಕಾಪಾಡಿಕೊಳ್ಳಲು ಆಟ ಪ್ರಮುಖ ಪಾತ್ರ ವಹಿಸುತ್ತದೆ. ವಿವಿಧ ಆಟಗಳಲ್ಲಿ ತೊಡಗಿದರೆ ಅವರು ಸದೃಢರಾಗುತ್ತಾರೆ. ಚೆನ್ನಾಗಿ ಪರಿಣತಿ ಹೊಂದಿದರೆ ಆಟವನ್ನೂ ಸಹ ವೃತ್ತಿಯಾಗಿ ಮುಂದುವರಿಸಲು ಹೇರಳ ಅವಕಾಶವಿದೆ. ಹೀಗಾಗಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾಗಿರುವ ಆಟಕ್ಕೆ ಪಾಲಕರು ಹೆಚ್ಚಿನ ಆದ್ಯತೆ, ಸಮಯ ನೀಡಬೇಕು ಎಂದು ಕುಂದಾಪುರ ತಾಲೂಕು ಕ್ರೀಡಾ ಇಲಾಖಾ ಅಧಿಕಾರಿ ಕುಸುಮಾಕರ ಶೆಟ್ಟಿ ಸಲಹೆ ನೀಡಿದರು.
ಸಂಸ್ಥೆಯ ಉಪ ಕಾರ್ಯಕಾರಿ ನಿರ್ದೇಶಕ ಶಿವಾನಂದ ಶೆಟ್ಟಿ ಸ್ವಾಗತಿಸಿದರು. ಕ್ಷೇತ್ರ ಕಾರ್ಯಕ್ರಮದ ನಿರ್ದೇಶಕ ಶ್ರೀನಿವಾಸ ಗಾಣಿಗ ಪ್ರಾಸ್ತಾವಿಕವಾಗಿ ಮಾತಮಾಡಿದರು. ಕ್ಷೇತ್ರ ಕಾರ್ಯಕ್ರಮದ ಸಹ ನಿರ್ದೇಶಕಿ ಕೃಪಾ ಎಂ.ಎಂ. ವಂದಿಸಿದರು. ಸಂಸ್ಥೆಯ ಪಂಚಾಯಿತಿ ಮಟ್ಟದ ಸೌಕರ್ಯಕಾರ ಗಣೇಶ ಶೆಟ್ಟಿ ನಿರೂಪಿಸಿದರು.
ವಿಶ್ವಸಂಸ್ಥೆಯು ಜೂ.11ಅನ್ನು ಅಂತಾರಾಷ್ಟ್ರೀಯ ಆಟದ ದಿನವೆಂದು ಕಳೆದ ವರ್ಷ ಘೋಷಿಸಿದೆ. ಅಂತಾರಾಷ್ಟ್ರೀಯ ಆಟದ ದಿನದ ವಾರ್ಷಿಕ ಸಂಭ್ರಮದ ನಿಮಿತ್ತ ಸಂಸ್ಥೆಯ ರಾಜ್ಯ ಸಂಪನ್ಮೂಲ ಕೇಂದ್ರವಾದ ನಮ್ಮ ಭೂಮಿಯಲ್ಲಿ ಮಕ್ಕಳಿಗಾಗಿ ವಿವಿಧ ಆಟ ಏರ್ಪಡಿಸಲಾಗಿದೆ. ವಿವಿಧ ಗ್ರಾಪಂಗಳ ಮಕ್ಕಳ ಸಂಘಗಳ ಪ್ರತಿನಿಧಿಗಳು, ರಾಜ್ಯ ಸಂಪನ್ಮೂಲ ಕೇಂದ್ರದಲ್ಲಿ ಕಲಿಯುತ್ತಿರುವವರು ಸೇರಿ 140ಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. | ಶ್ರೀನಿವಾಸ ಗಾಣಿಗ. ಕ್ಷೇತ್ರ ಕಾರ್ಯಕ್ರಮದ ನಿರ್ದೇಶಕ