ಗಾಳಿಯಲ್ಲಿ ಗುಂಡಿನ ಸದ್ದು

WhatsApp Image 2023-08-23 at 2.46.29 PM
Published on

ಧಾರವಾಡ: ಭೂ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಗರದ ಅತ್ತಿಕೊಳ್ಳ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಮುಂಬೈ ಮೂಲದ ಸುಶಾಂತ ಅಗರವಾಲ್ ಎಂಬಾತ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಸುಶಾಂತ ಮತ್ತು ಪವನ್ ಕುಲಕರ್ಣಿ ಮಧ್ಯೆ ಜಮೀನು ವಿವಾದ ಇತ್ತು. ಈ ವಿಚಾರವಾಗಿ ಮÁತುಕತೆ ನಡೆಯುತ್ತಿದ್ದ ವೇಳೆ ಸುಶಾಂತ ತನ್ನ ಪರವಾನಗಿ ಇದ್ದ ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ವಿದ್ಯಾಗಿರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹು- ಧಾ ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ ಎಂ., ಸುಶಾಂತ ಅಗರವಾಲ್ ಗಾಳಿಯಲ್ಲಿ ಗುಂಡು ಹಾರಿಸಿದ್ದ ಮÁಹಿತಿ ಬಂದಿತ್ತು. ಅವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಪವನ ಕುಲಕರ್ಣಿ ಎಂಬುವರ ಮಧ್ಯೆ ಭೂವಿವಾದ ಇರುವುದು ಗೊತ್ತಾಗಿದೆ. ಇಬ್ಬರ ಜಮೀನು ಅಕ್ಕಪಕ್ಕದಲ್ಲಿದ್ದು, ಪವನ ಕಡೆಯವರು ಕೆಲಸ ಮಾಡುತ್ತಿದ್ದರು. ಈ ಸಂಬAಧ ಬುಧವಾರ ಇಬ್ಬರ ಮಧ್ಯೆ ಮÁತುಕತೆ ನಡೆದಿದ್ದ ವೇಳೆ ಮಾತು ಬೆಳೆದು ಸುಶಾಂತ ಭಯದಲ್ಲಿ ಆತ ಫೈರ್ ಮÁಡಿದ್ದಾನೆ. ವಿಚಾರಣೆ ಮುಂದುವರಿಸಲಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net