ಮಳೆಯಿಂದ ಪಟಾಕಿ ವ್ಯಾಪಾರ ಠುಸ್..!

blm (5)
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ರಾಜ್ಯದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ವಾಡಿದ್ದರೂ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಹಬ್ಬದ ವಾತಾವರಣದ ಜತೆಗೆ ಅಕಾಲಿಕ ಮಳೆಯ ಕಾರ್ಮೋಡ ಆವರಿಸಿದೆ. ಹಬ್ಬದ ಪ್ರಮುಖ ಆಕರ್ಷಣೆಯಾದ ಪಟಾಕಿ ಸಿಡಿಸುವ ಉತ್ಸಾಹಕ್ಕೆ ಮಳೆ ತಣ್ಣೀರೆರೆಚಿದ್ದು, ಪಟಾಕಿ ವ್ಯಾಪಾರದ ಮೇಲೆ ಇದು ಪರಿಣಾಮ ಬೀರಿದೆ.

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರು, ಸುಳ್ಯ ಹಾಗೂ ಉಡುಪಿಯ ಕಾರ್ಕಳ, ಕುಂದಾಪುರ ಸೇರಿದಂತೆ ಪ್ರಮುಖ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಮಳಿಗೆಗಳು ನಿರ್ವಾಣಗೊಂಡಿದ್ದವು. ಆದರೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಜನ ಪಟಾಕಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ದ.ಕ. ಹಾಗೂ ಉಡುಪಿ ಜಿಲ್ಲೆಯ ನೂರಾರು ತಾತ್ಕಾಲಿಕ ಪಟಾಕಿ ಮಳಿಗೆಗಳಿಗೆ ವ್ಯಾಪಾರದಲ್ಲಿ ಭಾರಿ ಕುಂಠಿತವಾಗಿದೆ.

ದಿನಕ್ಕೆ ಲಕ್ಷಾಂತರ ಮೊತ್ತದ ವ್ಯಾಪಾರದ ಉದ್ದೇಶವನ್ನು ಇಟ್ಟುಕೊಂಡಿದ್ದ ವ್ಯಾಪಾರಸ್ಥರು ಇದೀಗ ಬರೀ ದಿನಕ್ಕೆ 20ರಿಂದ 30 ಸಾವಿರ ರೂ.ನಷ್ಟು ಮಾತ್ರ ವ್ಯಾಪಾರ ವಾಡುವಂತಾಗಿದೆ. ಗುಡುಗು ಸಹಿತ ಮಳೆಗೆ ಪಟಾಕಿ ಖರೀದಿಸುವವರ ಸಂಖ್ಯೆ ಗಣನೀಯ ಪ್ರವಾಣದಲ್ಲಿ ಇಳಿಕೆಯಾಗಿದೆ.

 ಹಬ್ಬದ ಸಿದ್ಧತೆಗಳಿಗೂ ಮಳೆ ಅಡ್ಡಿ

ಪಟಾಕಿ ವ್ಯಾಪಾರ ಮಾತ್ರವಲ್ಲ ಮನೆಯಂಗಳದಲ್ಲಿ ದೀಪ ಹಚ್ಚುವ ಕಾರ್ಯಕ್ಕೂ ಮಳೆ ಅಡ್ಡಿಪಡಿಸಿದೆ. ಸಂಜೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದರಿಂದ ಜನ ದೀಪೋತ್ಸವ ವಾಡುವ ಆಸೆ ಕೈಬಿಡುತ್ತಿದ್ದಾರೆ. ಹಬ್ಬದ ವಾತಾವರಣವನ್ನೇ ಮಂಕಾಗಿಸಿದೆ.

ದೀಪಾವಳಿ ವರ್ಷದ ದೊಡ್ಡ ಹಬ್ಬ, ಈ ಸಮಯದಲ್ಲಿ ಉತ್ತಮ ವ್ಯಾಪಾರ ನಿರೀಕ್ಷೆಯಲ್ಲಿದ್ದೆವು. ಆದರೆ ಕಳೆದೊಂದು ವಾರದಿಂದ ಬೀಳುತ್ತಿರುವ ಮಳೆ ಎಲ್ಲ ಲೆಕ್ಕಾಚಾರ ತಲೆಕೆಳಗೆ ವಾಡಿದೆ. ರವಾನಂದ, ಪಟಾಕಿ ವ್ಯಾಪಾರಿ ಉಡುಪಿ ಅಕಾಲಿಕ ಮಳೆ ದೊಡ್ಡ ನಷ್ಟ ತಂದಿದೆ. ಪಟಾಕಿಗಳು ಒದ್ದೆಯಾಗುವ ಭಯದಿಂದ ಹೆಚ್ಚಿನದನ್ನು ವಾರಾಟಕ್ಕೆ ಇಟ್ಟಿಲ್ಲ. ಜನರು ಸಹ ಮಳೆಯ ಕಾರಣದಿಂದ ಸಿಡಿಸುವುದು ಕಷ್ಟ ಎಂದು ತಿಳಿದು ಅಲ್ಪ ಪ್ರವಾಣದಲ್ಲಿ ವಾತ್ರ ಖರೀದಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 50ರಷ್ಟು ವ್ಯಾಪಾರವೂ ಆಗಿಲ್ಲ. ಸಂತೋಷ್ ಕುವಾರ್, ವ್ಯಾಪರಸ್ಥರು. ದೀಪಾವಳಿ ಸಂಭ್ರಮ ಇಡೀ ದೇಶಕ್ಕೆ ಸಂತೋಷ ತಂದರೆ, ದ.ಕ. ಮತ್ತು ಉಡುಪಿ ಜಿಲ್ಲೆಗಳ ಪಟಾಕಿ ವ್ಯಾಪಾರಿಗಳಿಗೆ ವಾತ್ರ ಈ ಅಕಾಲಿಕ ಮಳೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಹಬ್ಬದ ಕೊನೆಯ ದಿನಗಳಲ್ಲಾದರೂ ಮಳೆ ಬಿಡುವು ನೀಡಿ ವ್ಯಾಪಾರ ಚೇತರಿಸಿಕೊಳ್ಳಬಹುದೇ ಎಂದು ನೋಡಬೇಕು. ರಮೇಶ್ ಶೆಟ್ಟಿ, ವ್ಯಾಪರಸ್ಥರು. https://www.vijayavani.net/katapadi-underpass-work-in-november https://www.vijayavani.net/young-people-took-an-old-woman-to-the-hospital

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net