ಸಕಾಲದಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ, ತಪ್ಪಿದ ಅನಾಹುತ

Firefighters arrived on time, averting disaster
ವಿಜಯಪುರ ಜಿಲ್ಲೆಯ ಬಸವಸಾಗರ ಜಲಾಶಯ ಸಮೀಪದ ಸರ್ಕಾರಿ ಸಸ್ಯಪಾಲನಾ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು.
Published on

ನಾಲತವಾಡ: ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯ ಗಡಿ ಭಾಗದ ಬಸವಸಾಗರ ಜಲಾಶಯ ಸಮೀಪದ ಸರ್ಕಾರಿ ಸಸ್ಯಪಾಲನಾ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಅನಾಹುತ ತಪ್ಪಿದೆ.

ಮುದ್ದೇಬಿಹಾಳ ಸಿಪಿಐ ಅಹ್ಮದ್ ಪಸಿಯುದ್ದಿನ್, ಪಿಎಸ್‌ಐ ಸಂಜಯ ತಿಪ್ಪಾರೆಡ್ಡಿ, ನಾಲತವಾಡ ಹೊರಠಾಣೆ ಸಿಬ್ಬಂದಿ ಬಸವರಾಜ ಹಿಪ್ಪರಗಿ, ರವಿ ವಿಜಯಪುರ, ಹನುಮಂತ ಹೆಬ್ಬುಲಿ, ಬಸವರಾಜ ಚಿಂಚೋಳಿ, ಅಗ್ನಿ ಶಾಮಕ ದಳ ಅಧಿಕಾರಿ ಪ್ರಮೋದ ಸುಂಕದ ಹಾಗೂ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net