

ಶಿವಮೊಗ್ಗ: ಜಿಲ್ಲೆಯಾದ್ಯಂತ ಪಟಾಕಿ ಗೋದಾಮು ಮತ್ತು ಮಳಿಗೆಗಳ ಮೇಲೆ ಪೊಲೀಸರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳ ತಂಡ ದಾಳಿ ನಡೆಸಿ 5 ಪ್ರಕರಣ ದಾಖಲಿಸಿ 1.40 ಕೋಟಿ ರೂ. ಮೌಲ್ಯದ 3 ಸಾವಿರ ಕೆಜಿ ಪಟಾಕಿಗಳನ್ನು ಜಪ್ತಿ ಮಾಡಿದೆ.
ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರ ಸೂಚನೆ ಮೇರೆಗೆ 60ಕ್ಕೂ ಅಧಿಕ ಮಳಿಗೆ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿ ಭದ್ರಾವತಿ ಹೊಸಮನೆ, ಹೊಳೆಹೊನ್ನೂರು, ಶಿವಮೊಗ್ಗದ ವಿನೋಬನಗರ, ಕೋಟೆ ಠಾಣೆ ಮತ್ತು ಸಾರಗ ಟೌನ್ ಠಾಣೆ ವ್ಯಾಪ್ತಿಯಲ್ಲಿ ಗೋದಾಮಿನಲ್ಲಿದ್ದ ಪರವಾನಗಿಗಿಂತ ಹೆಚ್ಚುವರಿ ಸಂಗ್ರಹಿಸಿದ್ದ ಒಟ್ಟಾರೆ 3000 ಕೆಜಿ ಪಟಾಕಿಗಳನ್ನು ಜಪ್ತಿ ಮಾಡಲಾಗಿದೆ.
ಡಿವೈಎಸ್ಪಿಗಳು, ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು ಹಾಗೂ ಕಂದಾಯ, ಲೋಕೋಪಯೋಗಿ, ಅಗ್ನಿಶಾಮಕ, ಮೆಸ್ಕಾಂ, ಮಹಾನಗರ ಪಾಲಿಕೆ, ನಗರ ಪಾಲಿಕೆ, ತಾಲೂಕು ಪಂಚಾಯತಿಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.