ಮನೆಯೊಳಗೆ ಪಟಾಕಿ ಸಿಡಿದು ವ್ಯಕ್ತಿ ಗಂಭೀರ

Firecrakers_symbol
Published on

ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕರಿವೇಡಗಂ ಬಂಡಂಗೈ ಎಂಬಲ್ಲಿ ಮನೆಯೊಳಗೆ ಪಟಾಕಿ ಸಿಡಿದು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಲ್ಲಿನ ನಿವಾಸಿ ಮೋಹನದಾಸ್(46)ಗಾಯಗೊಂಡಿದ್ದು, ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ ಸ್ಪೋಟ ಸಂಭವಿಸಿದೆ. ಪ್ರಕರಣದ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸ್ಫೋಟದಿಂದ ಮನೆಗೆ ಹಾನಿಯುಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net