ಸೆ.23ರಿಂದ ಬಂದೂಕು ಬಳಕೆ ತರಬೇತಿ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜನೆ

Gun
Published on

ಮಂಡ್ಯ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೆ.23ರಿಂದ 28ರವರೆಗೆ ಬಂದೂಕು ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರಿಗೆ ತರಬೇತಿ ಆಯೋಜಿಸಲಾಗಿದೆ.
ಈಗಾಗಲೇ ಆಯುಧ ಹೊಂದಿರುವ ಹಾಗೂ ಪಡೆಯಲು ಇಚ್ಛಿಸುವ ಸಾರ್ವಜನಿಕರಿಗೆ ಅದರ ಬಳಕೆ, ನಿರ್ವಹಣೆ, ಗುರಿ ಅಭ್ಯಾಸದ ತರಬೇತಿ ಅವಶ್ಯಕವಾಗಿದೆ. ಜತೆಗೆ ಹೊಸದಾಗಿ ಪರವಾನಗಿ ಪಡೆಯಲು ಬಂದೂಕು ಪ್ರಮಾಣ ಪತ್ರ ಬೇಕಿರುವುದರಿಂದ ತರಬೇತಿ ಪಡೆದುಕೊಳ್ಳಬೇಕು. ಆದ್ದರಿಂದ ಸಾರ್ವಜನಿಕರು ನಿಗದಿತ ಶುಲ್ಕ ಪಾವತಿಸಬೇಕು. ಆಸಕ್ತರು ಸೆ.18ರೊಳಗೆ ಜಿಲ್ಲಾ ಪೊಲೀಸ್ ಕಚೇರಿಯ ಆಯುಧ ಶಾಖೆಯಲ್ಲಿ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಪಡೆದು ವಾಸ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಾಗದೇ ಇರುವ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೃಢೀಕರಣ ಪತ್ರದೊಂದಿಗೆ ಡಿಎಆರ್ ಘಟಕಕ್ಕೆ ಸಲ್ಲಿಸಬೇಕು.
ಆರು ದಿನ ಬಂದೂಕಿನ ಬಗ್ಗೆ ತರಗತಿ, ಕೊನೇ ದಿನ ಗುರಿ ಅಭ್ಯಾಸ ಇರಲಿದೆ. ಈ ವೇಳೆ ಉಪಯೋಗಿಸುವ ಗುಂಡುಗಳಿಗೆ ತಗಲುವ ವೆಚ್ಚವನ್ನು ಆಯಾ ಅಭ್ಯರ್ಥಿಗಳೇ ಭರಿಸಬೇಕು. ಪ್ರತಿದಿನ ಬೆಳಗ್ಗೆ 7ಗಂಟೆಯಿಂದ 9ರವರೆಗೆ ತರಬೇತಿ ಇರಲಿದೆ. ಈ ಅವಧಿಯಲ್ಲಿ ಬಿಳಿ ಪ್ಯಾಂಟ್, ಬಿಳಿ ಅಂಗಿ ಹಾಗೂ ಬಿಳಿ ಷೂ, ಗೌಂಡ್ ಶೀಟ್ ಇರಬೇಕು. ಮಾಹಿತಿಗೆ ತರಬೇತಿ ಉಸ್ತುವಾರಿ ಡಿಎಆರ್ ಡಿವೈಎಸ್ಪಿ ಎಸ್.ರಾಚಯ್ಯ ಅವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net