ಅಗ್ನಿ ಅವಘಡ ತಪ್ಪಿಸುವ ಅರಿವಿರಲಿ

svl
Published on

ಸಾಸ್ವೆಹಳ್ಳಿ: ಮನುಷ್ಯರಿಗೆ ನಿತ್ಯ ಜೀವನದಲ್ಲಿ ಬೆಂಕಿ, ನೀರು ಬಹಳ ಮುಖ್ಯ. ಆದರೆ, ಅದರಿಂದ ಸಂಭವಿಸುವ ಅವಘಡಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಅರಿವು, ಜಾಗೃತಿ ಅವಶ್ಯ ಎಂದು ತಾಲೂಕು ಅಗ್ನಿಶಾಮಕ ಠಾಣೆ ತಾಲೂಕು ಅಧಿಕಾರಿ ಟಿ.ಆರ್. ಪರಶುರಾಮ್ ಹೇಳಿದರು.

ಹೋಬಳಿಯ ಹೊಸಹಳ್ಳಿ 1ನೇ ಕ್ಯಾಂಪ್ ಗ್ರಾಮದ ಜ್ಞ್ಞಾನೋದಯ ಸ್ಕೂಲ್‌ನಲ್ಲಿ ಮಂಗಳವಾರ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಅಗ್ನಿಶಾಮಕ ಸೇವಾ ಸಪ್ತಾಹದಲ್ಲಿ ಅಗ್ನಿ ಸುರಕ್ಷತಾ ಮುಂಜಾಗ್ರತಾ ಕ್ರಮ, ಅವಘಡದಲ್ಲಿ ಕೈಗೊಳ್ಳಬೇಕಾದ ಪ್ರಥಮ ಕಾರ್ಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ, ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ನದಿ-ಕೆರೆಗಳಲ್ಲಿ ಸ್ನಾನಕ್ಕೆಂದು ಹೋಗಿ ದುರಂತ ಕಂಡ ಘಟನೆಗಳು ಸಾಕಷ್ಟು ನಡೆಯುತ್ತಿವೆ. ಈ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜ್ಞಾನೋದಯ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net